ಕೊಳೆತ ಶವ ಪತ್ತೆ: ಯುವಕನ ಕೊಲೆ, ಓರ್ವನ ಬಂಧನ
ಕೊಳೆತ ಶವ ಪತ್ತೆ: ಯುವಕನ ಕೊಲೆ
ಶಹಾಪುರ: ಯುವತಿಯ ಸಂಬಂಧಿಕರು ಪ್ರೀತಿಸಿದ ಯುವಕನ್ನು ಕೊಲೆ ಮಾಡಿ ನಂತರ ಬಲವಂತವಾಗಿ ವಿಷ ಕುಡಿಸಿ ಗೊತ್ತಾಗದಿರಲಿ ಎಂದು ವಿಷ ಕುಡಿಸಿದ ಬಾಟಲ್ ಪಕ್ಕಷದಲ್ಲೇ ಇಟ್ಟು ಹೋದ ಬಗ್ಗೆ ಭಾನುವಾರ ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ ಮಲ್ಲಪ್ಪ(20) ಕೊಲೆಯಾದ ಯುವಕ. ಅದೇ ಗ್ರಾಮದ ಯುವತಿಯನ್ನು ಸಂತೋಷ ಪ್ರೀತಿಸಿ ಫೋನಿನಲ್ಲಿ ಮಾತನಾಡುವುದನ್ನು ಯುವತಿಯ ಸಂಬಂಧಿಕರು ನೋಡಿ ನ್ಯಾಯ ಮಾಡೋಣ ಬನ್ನಿ ಎಂದು ಬುಧವಾರ (ಡಿ 31) ಶಹಾಪುರದ ಪ್ರಿಯಾಂಕ ಕಾಲೇಜಿಗೆ ಕರೆಯಿಸಿ, ಅಲ್ಲಿ ಸಂತೋಷನ ಮೇಲೆ ಹಲ್ಲೆ ಮಾಡಿ ನಂತರ ರಾತ್ರಿ ಸಮಯದಲ್ಲಿ ಯುವತಿಯ ಸಂಬಂಧಿಕರು ಕೊಲೆ ಮಾಡಿ ಶಹಾಪುರ ನಗರದ ಬಾಲಕಿಯರ ವಸತಿನಿಯದ ಹತ್ತಿರ ಒಗೆದು ಹೋಗಿದ್ದು, ಕೊಲೆ ಮಾಡಿದ್ದು ಗೊತ್ತಾಗಬಾರದೆಂದು ವಿಷ ಕುಡಿಸಿ ಸಂತೋಷನ ಪಕ್ಕದಲ್ಲಿ ವಿಷದ ಬಾಟಲಿ ಇಟ್ಟು ಹೋಗಿದ್ದಾರೆ ಎಂದು ಆರೋಪಿಸಿ ಸಂತೋಷನ ಅಣ್ಣ ಅಮರೇಶ ದೂರಿನಲ್ಲಿ ತಿಳಿಸಿದ್ದಾರೆ.
ಡಿ.31ರಂದು ಮನೆಯಿಂದ ಹೋದ ಯುವಕ ನಗರದ ಬಾಲಕಿಯರ ವಸತಿ ನಿಯಲದ ಮಾರ್ಗದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಬ್ಬರ ಬಂಧನ
ಶಹಾಪುರ: ಸಂತೋಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ ನೀಲಕಂಠ ಬಡಿಗೇರ ಎನ್ನುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಚೆನ್ನಯ್ಯ ಸಿ.ಹಿರೇಮಠ ತಿಳಿಸಿದ್ದಾರೆ.
———————