Homeಮಹಿಳಾ ವಾಣಿ
ಮುಟನ್ ಕೈಮಾ ವಡೆ ಈ ತರಹ ಒಮ್ಮೆ ಮಾಡಿ ನೋಡಿ
ಬೇಕಾಗುವ ಪದಾರ್ಥಗಳು…
- ಮಟನ್ ಕೈಮಾ- 500 ಗ್ರಾಂ
- ಈರುಳ್ಳಿ – 2 ಸಣ್ಣಗೆ ಕತ್ತರಿಸಿದ್ದು
- ಹಸಿ ಮೆಣಸಿನಕಾಯಿ – 1
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಚಕ್ಕೆ, ಲವಂಗ ಪುಡಿ – 1/4 ಟೀಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ದನಿಯಾ ಪುಡಿ- ಅರ್ಧ ಚಮಚ
- ಕಡಲೆ ಹಿಟ್ಟು- 1 ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಪಾತ್ರೆಯೊಂದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಕಡಲೆ ಹಿಟ್ಟು- 1 ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಎಣ್ಣೆ ಕಾಕಿ. ಇದೀಗ ಮಸಾಲೆ ಮಿಶ್ರಣವನ್ನು ವಡೆಗಳಾಗಿ ತಟ್ಟಿ, ಎಣ್ಣೆಗೆ ಬಿಡಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಎರಡೂ ಬದಿಯಲ್ಲಿ ಬೇಯಿಸಿದರೆ, ರುಚಿಕರವಾದ ಕೈಮಾ ವಡೆ ಸವಿಯಲು ಸಿದ್ಧ.