ಅರ್ಜುನ ದಸರಾ ಅಂಬಾರಿ ಹೊರುವುದು ಡೌಟು..?
ದಸರಾ ಆನೆಗೆ ಆರೋಗ್ಯದಲ್ಲಿ ಏರುಪೇರು..!
ಮೈಸೂರ: ಮೈಸೂರು ದಸರಾ- 2017 ತಯಾರಿ ಜೋರಾಗಿಯೇ ನಡೆಯುತ್ತಿದೆ. ದರ್ಬಾರ ನಡೆಸಲು ಮತ್ತು ಅಂಬಾರಿ ಮೆರವಣಿಗೆ ಬೇಕಾದ ಸಿದ್ಧತೆ ನಡೆಯುತ್ತಿದೆ.
ಈ ನಡುವೆ ಅಂಬಾರಿ ಹೊರಲು ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಅರ್ಜುನ ಎಂಬ ಹೆಸರಿನ ಆನೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ.
ಅಂಬಾರಿ ಸಾರಥಿ ಅರ್ಜುನನನಿಗೆ ಭೇದಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾಡಿನಿಂದ ಬರುವಾಗಲೇ ಅರ್ಜುನ ಭೇದಿಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಅಲೋಕಾ ಪ್ಯಾಲೇಸ್‍ನಲ್ಲೂ ಬಿಟ್ಟಾಗಲು ಒಂದೆರಡು ಬಾರಿ ಭೇದಿ ಮಾಡಿಕೊಂಡಿದ್ದ ಅರ್ಜುನನ್ನು ಕೂಡಲೇ ಚಿಕತ್ಸೆಗೆ ಸೂಚಿಸಲಾಗಿದೆ. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಆನೆಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳದಲ್ಲಿದ್ದ ಮಾವುತ ಹಾಗೂ ಕಾವಾಡಿಗ ವೈದ್ಯರಿಗೆ ಸಹಕರಿಸುತ್ತಿದ್ದು, ಭಯಪಡುವ ಅಗತ್ಯವಿಲ್ಲ. ಅರ್ಜುನ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಅಲೋಕಾ ಪ್ಯಾಲೇಸ್‍ನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ನಿನ್ನೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಪ್ರಸ್ತುತ ಅಲೋಕಾ ಪ್ಯಾಲೇಸ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅರ್ಜುನನಿಗೆ ಯಾವುದೇ ಸಮಸ್ಯೆ ಇಲ್ಲ. ಶೀಘ್ರವೇ ಚೇತರಿಸಿಕೊಳ್ಳಲಿದ್ದಾನೆ ಎಂದು ಮಾಧ್ಯಮಕ್ಕೆ ವೈದ್ಯರು ಮಾಹಿತಿ ನೀಡಿದ್ದಾರೆ.
ದಸಾರ ಅಂಬಾರಿ ಮೆರವಣಿಗೆಗೆ ಲಕ್ಷಾಂತರ ಜನ ಸಾಕ್ಷಿಯಾಗುತ್ತಾರೆ. ವಿಜೃಂಬಣೆಯ ಮೆರವಣಿಗೆ ಅದಾಗಿದ್ದು, ಕಳೆದ ಹಲವು ವರ್ಷಗಳಿಂದ ಅರ್ಜುನ ಆನೆ ನಾಗರಿಕರ ಆಸೆ ಈಡೇರಿಸಿದೆ. ಯಾವುದೇ ಗೊಂದಲ ಸೃಷ್ಟಿಸಿದೆ ತನ್ನ ಮಹತ್ವದ ಜವಬ್ದಾರಿ ನಿಭಾಯಿಸಿದೆ. ಒಂದು ವೇಳೆ ಅರ್ಜುನ ಬಳಲಿಕೆಯಿಂದ ಚೇತರಿಸಿಕೊಳ್ಳದಿದ್ದಲ್ಲಿ ಬೇರೆ ಆನೆ ಮೇಲೆ ಅಂಬಾರಿ ಮೆರವಣಿಗೆ ಕಷ್ಟಸಾಧ್ಯ ಎಂಬ ಸುದ್ದಿಯು ಹರಡಿದೆ. ಹೀಗಾಗಿ ಯಾವುದೇ ತೊಂದರೆಯಾಗದೆ ಅರ್ಜುನ ಕೂಡಲೇ ಚೇತರಿಸಿಕೊಳ್ಳಲ್ಲಿ ಎಂದು ಆ ಚಾಮುಂಡಿ ತಾಯಿ ಹತ್ತಿರ ಪ್ರಾರ್ಥನೆ ಸಲ್ಲಿಸುವ..ಏನಂತೀರಾ..