ಪ್ರಮುಖ ಸುದ್ದಿ
ಕಿಚ್ಚ ಸುದೀಪ್ ಗೆ ವಾಲ್ಮೀಕಿ ರತ್ನ.!
ಕನ್ನಡ ಚಿತ್ರ ನಟ ಸುದೀಪ್ ಗೆ ವಾಲ್ಮೀಕಿ ರತ್ನ ಪ್ರಶಸ್ತಿ
ವಿವಿ ಡೆಸ್ಕ್ಃ ಕನ್ನಡ ಚಲನ ಚಿತ್ರ ನಟ ಕಿಚ್ಚ ಸುದೀಪ್ ಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರ ಸ್ವಾಮೀಜಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ. ಫೆ.8,9 ರಂದು ನಡೆಯುವ ರಾಜನ ಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆ ವೇಳೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ದಾವಣಗೇರಾ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆಯುವ ಈ ಜಾತ್ರೆ ಸಂದರ್ಭದಲ್ಲಿ ನಟ ಸುದೀಪ್ ಗೆ ಈ ಪ್ರಶಸ್ತಿ ನೀಡಲಾಗುವದು ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಅಭಿಮಾನಿಗಳಿಂದ ಸುದೀಪ್ ಅವರಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿ ಅವರು ಅಭಿಮಾನಿಗಳು ಸಂತಸ ಹಂಚಿಕೊಳ್ಳುತ್ತಿರುವ ಕಂಡು ಬರುತ್ತಿದೆ.