ಪ್ರಮುಖ ಸುದ್ದಿಬಸವಭಕ್ತಿ

ಮಹಿಳೆಯರ ಸಂಕಲ್ಪ ಈಡೇರಲಿ – ವರಲಿಂಗೇಶ್ವರ ಅವಧೂತರು

ನವರಾತ್ರಿ ಉತ್ಸವ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ

yadgiri, ಶಹಾಪುರಃ ತಾಯಿ ಅಂಭಾ ಭವಾನಿ ಕನಸಿನಲ್ಲಿ ಸೂಚನೆ ನೀಡಿದಂತೆ ಇಂದು ಮಹಾತ್ಮ ಚರಬಸವೇಶ್ವರ ದೇವಸ್ಥಾನದ ಸನ್ನಧಿಯಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ ಜನ ಕಲ್ಯಾಣಾರ್ಥವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ತಾಯಿ ದುರ್ಗೆ ಎಲ್ಲರಿಗೂ ಒಳಿತನ್ನೆ ಮಾಡಲಿ. ಕೊರೊನಾ ಮಹಾಮಾರಿ ನಶಿಸಲಿ ಎಂದು ಸಂಚಾರಿ ಅವಧೂತ ವರಲಿಂಗೇಶ್ವರರು ತಿಳಿಸಿದರು.

ನಗರದ ಚರಬಸವೇಶ್ವರ ಗದ್ದುಗೆ ಸಭಾ ಮಂಟಪದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾದ ವಚನ ನೀಡಿದರು.

ಇಲ್ಲಿನ ಬೆಟ್ಟದ ಮೇಲಗಿರಿ ಪರ್ವತದಲ್ಲಿ ನವರಾತ್ರಿ ನಿಮಿತ್ತ ಭ್ರಮರಾಂಬ ದೇವಿಯ ಪೈಜಾ ಕೈಂಕರ್ಯ ಕೈಗೊಳ್ಳಬೇಕೆಂದು ಸಂಕಲ್ಪ ಮಾಡಿದಾಗ, ಆ ಕಾರ್ಯವನ್ನು ಬೆಟ್ಟದಲ್ಲಿ ಸಮರ್ಪಕವಾಗಿ ಕೈಗೂಡುವದು ಕಷ್ಟಸಾಧ್ಯ. ಕಾರಣ ಮಹಾತ್ಮ ಚರಬಸವೇಶ್ವರ ಸನ್ನಧಿಯಲ್ಲಿ ನವರಾತ್ರಿ ಉತ್ವದ ಕಾರ್ಯ ಮಾಡುವಂತೆ ಕನಸಿನಲ್ಲಿ ಅಂಭಾ ಭವಾನಿ ಸೂಚನೆ ನೀಡಿರುವ ಕಾರಣ ಪ್ರಪ್ರಥಮ ಬಾರಿಗೆ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀಮಠದ ಬಸಯ್ಯ ತಾತಾನವರು ಸೂಕ್ತ ಸ್ಥಳವಕಾಶ ಕಲ್ಪಿಸಿಕೊಟ್ಟಿದ್ದು, ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸಮಾಜದ ಶಾಂತಿ ನೆಲೆಸಲಿ, ಸದ್ಭಾವನೆ ಮೂಡಲಿ, ಮಹಿಳೆಯರ ಸಂಕಲ್ಪ ಈಡೇರಲಿ, ಜಗವೆಲ್ಲ ನಗುತಿರಲಿ ಎಂಬ ಸದುದ್ದೇಶದಿಂದ ತಾಯಿ ಹೊಟ್ಟೆ ತಣ್ಣಗಿದ್ದರೆ, ನಾವೆಲ್ಲ ಮಕ್ಕಳು ಸಂತೋಷದಿಂದ ಇರಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ತಾಯಂದಿರಿಗೆ ಶಾಸ್ತ್ರೋಕ್ತವಾಗಿ ಉಡಿ ತುಂಬುವ ಕಾರ್ಯವನ್ನು ನೆರವೇರಿಸುತ್ತಿದ್ದು, ಭಾಗವಹಿಸಿದ ಎಲ್ಲಾ ತಾಯಂದಿರಿಗೆ ಒಳಿತಾಗಲಿ ಎಂದು ಹಾರೈಸಿದರು.

ಡಾ.ಶರಣು ಬಿ.ಗದ್ದುಗೆ ಮಾತನಾಡಿ, ವರಲಿಂಗೇಶ್ವರ ಅವಧೂತರು ಸಂಚಾರಿಗಳಾಗಿದ್ದು, ಅವರು ವಾಕ್ಯಸಿದ್ಧಿ ಪುರುಷಾರಾಗಿ ಜನಾನುರಾಗಿಗಳಾಗಿದ್ದಾರೆ. ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯ ನಡೆದಿದ್ದು, ಅವರ ಸಂಕಲ್ಪದಂತೆ 108 ಜನ ಮುತೈದೆಯರಿಗೆ ಉಡಿ ತುಂಬಲಾಯಿತು. ಸೀರೆ, ಕುಪ್ಪಸ, ಬಳೆ, ಕೊಬ್ಬರಿ, ಹರಶಿಣ, ಕುಂಕುಮ, ಉತ್ತುತ್ತಿ ಮತ್ತು ಹೂ ನೀಡಿ ಮಾತೆಯರಿಗೆ ಉಡಿ ತುಂಬಲಾಯಿತು. ಶ್ರೀಮಠದ ಬಸಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಶ್ರೀಮಠದಿಂದ ಪೂಜ್ಯ ವರಲಿಂಗೇಶ್ವರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಹೇಶ ಆನೇಗುಂದಿ, ಗುರು ಕಾಮಾ, ಬಸವರಾಜ ಕೋರಿ, ಚಿಂತಿ ಸಾಹುಕಾರ, ಅಬ್ದುಲ್ ಹಾದಿಮನಿ, ಭೀಮು, ಉಮೇಶ ಮಹಾಮನಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button