ಕಾವ್ಯ
“ಜ್ಞಾನಿ ಕೊಂದ ಅಜ್ಞಾನಿ” ಉಪ್ಪಿನ್ ಬರಹ ನೋವು ತುಂಬಿದ ಕಾವ್ಯ
ಎಂ.ಎಂ. ಕಲಬುರಗಿಯವರು ಹುತಾತ್ಮರಾದ ದಿನದಂಗವಾಗಿ ಬರಹಗಾರ, ಪತ್ರಕರ್ತ ಉಪ್ಪಿನ್ ತುಂಬಾ ನೋವಿನಿಂದ ನೆನೆದು ಬರೆಯಲಾದ ಕವಿತೆ..
“ಜ್ಞಾನಿ ಕೊಂದ ಅಜ್ಞಾನಿ”
ಅವರ ಹಣೆಗೆ ಪಿಸ್ತೂಲಿಟ್ಟ
ನಿನ್ನ ಬಲಗೈ ಈಗಲೂ
ಅಜ್ಞಾನದ ಭಿಕ್ಷೆ ಬೇಡುತ್ತಿದೆ!
ಭಿಕ್ಷೆ ಬೇಡುವುದ ಬಿಟ್ಟು
ನಿನ್ನಲ್ಲಿ ಇತ್ತಾದರೂ ಏನು?
ಧರ್ಮದ ನಶೆಯ ಹೊರತು.
ನಿನ್ನ ಬಂದೂಕಿನ ಕೈ ಈಗಲೂ
ಹಂಗಿಸುತ್ತಿದೆ,
ಪ್ರತಿ ಸಲ ಕೂಳು ಬಾಯಿಗಿಡುವಾಗ.
ಕಾಡತೂಸೇ ತಿನ್ನು,
ಅಮಲೇ ಕುಡಿ.
ಬುದ್ಧ, ಬಸವ, ಗಾಂಧಿಗೂ
ಬಿಡದವರು,
ನಿನ್ನ ತಲೆಗೆ ತುಂಬಿದವರು.
ಹುಟ್ಟಿಸಲಾಗುತ್ತೇನೋ ನಿಮಗೆ,
ಮತ್ತ್ಯಾಕೆ ಕೊಂದಿರಿ..?
ತಂದು ಕೊಡಿ ಅವರನ್ನು,
ಹುಡುಕಿಕೊಂಡು ಹೋಗಿ ನಿಮ್ಮ
ದೇವರು ಧರ್ಮವನ್ನು.
ಅವೆಲ್ಲಿವೆ ನಮಗೇನು ಗೊತ್ತು!
ಕೊಲ್ಲುವ ನಿಮಗೆ ಆ ದೇವರೂ
ಕಾಣಲ್ಲ, ಇನ್ನೆಲ್ಲಿಯ ಧರ್ಮ..
ಮನುಜರಾಗಿ ಈಗಲಾದರೂ
ಕೂಳು ಇಳಿದೀತು ಹೊಟ್ಟಿಗೆ,
ಹೇಸಿಗೆ ಇಲ್ಲದೆ.
-ಶಿವಕುಮಾರ್ ಉಪ್ಪಿನ್.