ಪ್ರಮುಖ ಸುದ್ದಿ

ಶಹಾಪುರಃ ಪಾಗಲ್ ಪ್ರೇಮಿಗಳಿಬ್ಬರು ನೇಣಿಗೆ ಶರಣು, ಪೋಷಕರ ಆಕ್ರಂದನ

ಗುಂಡಗುರ್ತಿ ಪ್ರೇಮಿಗಳಿಬ್ಬರು ನೇಣಿಗೆ ಶರಣು

ಹುಚ್ಚು ಪ್ರೀತಿ ದುಡುಕಿದ ಯುವಕ, ಯುವತಿ ಆತ್ಮಹತ್ಯೆಃ ಪಾಲಕರು ಕಂಗಾಲು

ಶಹಾಪುರಃ ತಮ್ಮ ಪ್ರೇಮ ವೈಫಲ್ಯತೆಯಿಂದ ಪ್ರೇಮಿಗಳಿಬ್ಬರು ಮನನೊಂದು ನೇಣಿಗೆ ಶರಣಾದ ಘಟನೆ ವಡಗೇರಾ ತಾಲುಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ವರ್ಷದಿಂದಲೂ ಪರಸ್ಪರ ಪ್ರೇಮಿಸುತ್ತಿದ್ದ, ಒಂದೇ ಸಮುದಾಯದ ಯುವತಿ ಶೇಖಮ್ಮ [18] ಪಿಯುಸಿ ವಿಧ್ಯಾರ್ಥಿನಿಯಾಗಿದ್ದು. ಯಾದಗಿರಿ ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಪಾಸು ಮಾಡಿದ್ದಳು. ಅದೇ ಸಮುದಾಯದ ಬಿಎ ಪದವಿಧರ ಯುವಕ ಶರಣಬಸವ [22] ಎನ್ನುವನನ್ನು ಪೀತಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ.

ಯುವಕ ಶರಣಬಸವ ಕಾಲೇಜು ಇಲ್ಲದ ಕಾರಣ ಕೆಲಸ ಮಾಡಲೆಂದು ಬೆಂಗಳೂರಿಗೆ ಹೋಗಿದ್ದನು. ಇನ್ನೇನು ಕಾಲೇಜು ಪ್ರಾರಂಭಗೊಳ್ಳುತ್ತಿದ್ದಂತೆ ಯುವಕ ಶರಣಬಸವ ಮರಳಿ ಗ್ರಾಮಕ್ಕೆ ಬಂದಿದ್ದಾನೆ. ಅಲ್ಲದೆ ಗ್ರಾಮದ ಸ್ವಜಾತಿಯ ಯುವತಿ ಶೇಖಮ್ಮನೊಂದಿಗೆ ಆಗಾಗ ಮಾತುಕತೆ ಮುಂದುವರೆಸಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಮನೆಯವರು ಮದುವೆ ಕುರಿತು ಪ್ರಸ್ತಾಪ ಸಹ ಮಾಡಿದ್ದರು ಎಂದು ತಿಳಿದು ಬಂದಿದೆ. ಹೀಗೆ ಇರ್ವರ ಪ್ರೇಮ ಘಾಡವಾಗಿ ಬೇಳದ ಪರಿಣಾಮ ನಿನ್ನೆ ಆಹೋ ರಾತ್ರಿ ಯುವಕ ಶರಣಬಸವನ ಮನೆಗೆ ಬಂದ ಯುವತಿ, ಶರಣಬಸವನ ಮಲಗಿರುವ ಪ್ರತ್ಯೇಕ ಕೋಣೆಯಲ್ಲಿದ್ದರು ಎನ್ನಲಾಗಿದೆ. ಮದುವೆ ಕುರಿತು ಇಬ್ಬರ ಮನೆಯಲ್ಲಿ ಒಪ್ಪುವದಿಲ್ಲ ಎಂಬ ಸ್ವತಃ ನಿರ್ಧಾರಕ್ಕೆ ಬಂದಿದ್ದರೋ ಏನು ಗೊತ್ತಿಲ್ಲ.ಆದರೆ ಶರಣಬಸವನ ಮನೆಯವರು ಇನ್ನೂ ಯಾಕೋ ಎದ್ದಿಲ್ಲ ಶರಣಬಸವ ಎಂದು ಎನ್ನಿಸಲು ಕೋಣೆ ಬಾಗಿಲು ದಬ್ಬಿದ್ದಾರೆ.

ಆದರೆ ಒಳಗಡೆಯಿಂದ ಕೋಣೆ ಲಾಕ್ ಆಗಿದೆ. ಯಾಕೋ ಲಾಕ್ ಮಾಡಿಕೊಂಡಿದ್ದಾನೆ ಎಂದು ಮನೆಯವರಿಗೆ ತಿಳಿಸಲಾಗಿದೆ. ಎಷ್ಟು ಕೂಗಿದರೂ ಶರಣಬಸವ ಬಾಗಿಲು ತೆಗೆದಯ ಕಾರಣ ಗಾಬರಿಗೊಂಡ ಮನೆಯವರು ಬಾಗಿಲು ಮುರಿದು ನುಗ್ಗಿದಾಗ ಮನೆಯೊಳಗೆ ಆಶ್ಚರ್ಯ ಎಂಬಂತೆ ಶರಣಬಸವ ಮತ್ತು ಶೇಖಮ್ಮ ಇಬ್ಬರು ನೇಣಿಗೆ ಶರಣಾಗಿರುವದು ಕಂಡು ಬಂದಿದೆ. ದಿಗ್ಭ್ರಾಂತರಾದ ಶರಣಬಸವನ ಮನೆಯವರು ಯುವತಿ ಮನೆಯವರಿಗೆ ತಿಳಿಸದ್ದಾರೆ. ಅವರು ಬಂದು ನೋಡಲಾಗಿ ಗಾಬರಿಗೊಂಡಿದ್ದಾರೆ.

ಪಾಲಕರಲ್ಲಿ ಆಕ್ರಂದನ ಕೇಳಿ ಬಂದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ ಭಾಗವಾನ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಭೇಟಿ ನೀಡಿ ಇಬ್ಬರ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.

ಮೃತ ಯುವತಿಗೆ ನಾಲ್ವರು ತಂಗಿಯರಿದ್ದು. ಓರ್ವ ತಮ್ಮನಿದ್ದಾನೆ, ಕೂಲಿ ಮಾಡಿಕೊಂಡು ಜೀವನ ಮಾಡಬೇಕಾದ ಅನಿವಾರ್ಯತೆಯಲ್ಲಿ ಕುಟುಂಬ ನರಳುತ್ತಿದೆ. ಮೃತ ಪ್ರೇಮಿ ಯುವಕ ದುರ್ಬಲ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ಕೂಲಿ ಮಾಡಬೇಕೆಂದು ಬೆಂಗಳೂರಿಗೆ ಹೋಗಿ ತನ್ನ ಕಾಲೇಜು ಖರ್ಚು ವೆಚ್ಚಕ್ಕಾಗಿ ಹಣ ಜಮಾಯಿಸಿಕೊಂಡು ಬಂದಿದ್ದ, ಎಂದು ಮೃತರ ಕುಟುಂಬದ ಪಾಲಕರು ಪತ್ರಿಕೆಗೆ ಮಾಹಿತಿ ನೀಡಿದರು. ಪ್ರಕರಣ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಪಿಐ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button