ಯಾದಗಿರಿ – ಕಲ್ಬುರ್ಗಿ ರಸ್ತೆ ಮಾರ್ಗ ಸೇತುವೆ ಕಾಮಗಾರಿ ಧೂಳೋ ಧೂಳು ಬೇಸತ್ತ ಪ್ರಯಾಣಿಕರಿಂದ ಪ್ರತಿಭಟನೆ
ಪ್ರಯಾಣಿಕರಿಂದ ದಿಢೀರ ಪ್ರತಿಭಟನೆ ರಸ್ತೆಗೆ ನೀರೆರಿಯಲು ಒತ್ತಾಯ
ಯಾದಗಿರಿ – ಕಲ್ಬುರ್ಗಿ ರಸ್ತೆ ಮಾರ್ಗ ಸೇತುವೆ ಕಾಮಗಾರಿ ಧೂಳೋ ಧೂಳೋ ಬೇಸತ್ತ ಪ್ರಯಾಣಿಕರಿಂದ ಪ್ರತಿಭಟನೆ
ಪ್ರಯಾಣಿಕರಿಂದ ದಿಢೀರ ಪ್ರತಿಭಟನೆ ರಸ್ತೆಗೆ ನೀರಿಳಿಯಲು ಒತ್ತಾಯ
ವಿವಿ ಡೆಸ್ಕ್ ಯಾದಗಿರಿಯಿಂದ ಕಲ್ಬುರ್ಗಿ ಮಾರ್ಗ ತೆರಳುವ ಮಾರ್ಗ ರಸ್ರೆಯಲ್ಲಿ ಸೇತುವೆ ಕಾಮಗಾರಿ ನಡೆದಿದ್ದು, ರಸ್ತೆ ಪೂರ್ಣ ಧೂಳು ಆವತಿಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಈ ಕುರಿತು ವಾಹನ ಸವಾರರು, ಪ್ರತಾಣಿಕರು ಶುಕ್ರವಾರ ಸಂಜೆ ದಿಢೀರನೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ರಸ್ತೆ ಮಾರ್ಗ ಧೂಳು ಜಾಸ್ತಿ, ಸೇತುವೆ ಕಾಮಗಾರಿ ಗುತ್ತಿಗೆದಾರರು ಆಗಾಗ ರಸ್ತೆಯ ಮೇಲೆ ನೀರಿರಿಯಬೇಕು ಆದರೆ ಒಂಚೂರು ನೀರಿಲ್ಲದಂತೆ ಕಾಮಗಾರಿ ನಡೆಸುತ್ತಿರುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಈ ಕೂಡಲೇ ರಸ್ತೆಗೆ ನೀರು ಹರಿದು ಕಾಮಗಾರಿ ಆರಂಭಿಸಬೇಕು.
ಧೂಳಿನಿಂದ ಅಪಘಾತಗಳು ಸಂಭವಿಸುತ್ತಿವೆ. ಆರೋಗ್ಯ ಕೆಡುತ್ತಿದೆ ಕೂಡಲೇ ಕಾಮಗಾರಿ ಗುತ್ತಿಗೆದಾರರು ನಿತ್ಯ ಮೂರು ಬಾರಿ ರಸ್ತೆಗೆ ನೀರೆರೆದು ಕಾಮಗಾರಿ ಕೈಗೊಳ್ಳಬೇಕು. ಜೊತೆಗೆ ಕಾಮಗಾರಿ ಮೇಲ್ವಿಚಾರಕ ಇಂಜಿನಿಯರು ಈ ಕುರಿತು ತುರ್ತು ಗಮನ ಹರಿಸಲು ಒತ್ತಾಯಿಸಿದರು.