ಪ್ರಮುಖ ಸುದ್ದಿ
ವಿದೇಶ ಹಾಗೂ ರಕ್ಷಣಾ ನೀತಿ ರಾಜಕೀಯ ಅಸ್ತ್ರವಾಗಿ ಬಳಕೆ-ರಾಹುಲ್ ಟೀಕೆ
ವಿದೇಶ ಹಾಗೂ ರಕ್ಷಣಾ ನೀತಿ ರಾಜಕೀಯ ಅಸ್ತ್ರವಾಗಿ ಬಳಕೆ-ರಾಹುಲ್ ಟೀಕೆ
ನವದೆಹಲಿ: ಶತಶತಮಾನಗಳಿಂದ ನಿಮಾಣಗೊಂಡ ದೇಶವನ್ನು ಕೇವಲ ಸೆಕೆಂಡಿನಲ್ಲಿ ಅದನ್ನು ಅಳಿಸಿ, ಸಂಕಷ್ಟದ ಸಮಯವನ್ನು ಭಾರತಕ್ಕೆ ತಂದೊಡ್ಡಿದವರು ಯಾರು ಎಂಬುದನ್ನು ಇಡಿ ದೇಶದ ಜನರಿಗೆ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ಸಕಾರವು ವಿದೇಶ ಹಾಗೂ ರಕ್ಷಣಾ ನೀತಿಯನ್ನು ದೇಶಿಯ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ದೇಶವನ್ನು ದುರ್ಬಲಗೊಳಿಸುತ್ತಿದೆ. ಭಾರತ ಹಿಂದೆಂದಿಗೂ ಇಷ್ಟೊಂದು ಕಷ್ಟದ ಪರಿಸ್ಥಿತಿ ಎದುರಿಸಿಲ್ಲ ಎಂದಿದ್ದಾರೆ.
ಅಲ್ಲದೆ ಬೆಲೆ ಏರಿಕೆ, ನಿರುದ್ಯೋಗ, ಕೊರೊನಾ ಲಸಿಕೆ ಕೊರತೆ, ರೈತ ದಿವಾಳಿತನ ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಬಿಜೆಪಿ ಸಕಾರ ತಂದಿದೆ ಎಂದು ಆರೋಪಿಸಿದ್ದಾರೆ.