ಹೇಮರಡ್ಡಿ ಮಲ್ಲಮ್ಮ ಜಯಂತಿಃ ಏ.10 ರಂದು ಪೂರ್ವಭಾವಿ ಸಭೆ
ಏ.10 ರಂದು ಪೂರ್ವಭಾವಿ ಸಭೆ ಸಮಾಜದ ಸರ್ವರೂ ಭಾಗಿಗೆ ಕರೆ
ಹೇಮರಡ್ಡಿ ಮಲ್ಲಮ್ಮ ಜಯಂತಿಃ ಏ.10 ರಂದು ಪೂರ್ವಭಾವಿ ಸಭೆ
ಏ.10 ರಂದು ಪೂರ್ವಭಾವಿ ಸಭೆ ಸಮಾಜದ ಸರ್ವರೂ ಭಾಗಿಗೆ ಕರೆ
yadgiri,ಶಹಾಪುರಃ ಮೇ 10 ರಂದು ಸಾದ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸುವ ಹಿನ್ನೆಲೆ ನಗರದ ಡಿಗ್ರಿ ಕಾಲೇಜು ಪ್ರದೇಶದಲ್ಲಿರುವ ಟೌನ್ ಹಾಲ್ ನಲ್ಲಿ ಇದೇ ಏಪ್ರೀಲ್ 10 ರವಿವಾರ ಬೆಳಗ್ಗೆ 10:30 ಕ್ಕೆ ರಡ್ಡಿ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಬಂಧು ಬಾಂಧವರೆಲ್ಲರೂ ಭಾಗವಹಿಸುವ ಮೂಲಕ ಹಲವಾರು ಸಲಹೆ ಸೂಚನೆಯನ್ನು ನೀಡಬೇಕೆಂದು ವೀರಶೈವ ರಡ್ಡಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಮಾಲಿ ಪಾಟೀಲ್ ಕರೆ ನೀಡಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕಿನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ಸಮಾಜ ಈ ಮೊದಲು ನಿರ್ಧರಿಸಿದಂತೆ 10 ವರ್ಷಕ್ಕೊಮ್ಮೆ ಸಾದ್ವಿ ಮಲ್ಲಮ್ಮಳ ಜಯಂತಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಕಳೆದ 2012 ರಲ್ಲಿ ಹೇಂರಡ್ಡಿ ಮಲ್ಲಮ್ಮಳ ಜಯಂತಿ ಅತ್ಯಂತ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಲಾಗಿತ್ತು.
ಇದೀಗ ಮೇ.10 ರಂದು ಜಯಂತ್ಯುತ್ಸವ ಇದ್ದು, ಸಮುದಾಯದ ಸರ್ವರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು.
ಅದಕ್ಕಿಂತಲೂ ಮುಂಚೆ ಜಯಂತ್ಯುತ್ಸವ ಅಂಗವಾಗಿ ರವಿವಾರ ಬೆಳಗ್ಗೆ ಟೌನ್ ಹಾಲ್ ನಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು, ಎಲ್ಲರೂ ಆಗಮಿಸಿ ತನು, ಮನ ಧನದಿಂಧ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥರಡ್ಡಿ ದರ್ಶನಾಪುರ, ಚಂದ್ರಶೇಖರ ಲಿಂಗದಳ್ಳಿ, ಮಲ್ಲಾರಡ್ಡಿ ಪಾಟೀಲ್, ಶಂಕರಗೌಡ ಯಾಳವಾರ ಉಪಸ್ಥಿತರಿದ್ದರು,