ಪ್ರಮುಖ ಸುದ್ದಿ

ಮಹಿಪತಿದಾಸರು ತಪೋಗೈದ ಪುಣ್ಯಸ್ಥಳ ಮಂದಾಕಿನಿಃ ಸಂಶೋಧಕ ಭಾಸ್ಕರರಾವ್

ಸಗರಾದ್ರಿ ಬೆಟ್ಟದ ಮಂದಾಕಿನಿಯಲ್ಲಿ ಪವಮಾನ ಹೋಮ

ಸಗರಾದ್ರಿ ಬೆಟ್ಟದ ಮಂದಾಕಿನಿಯಲ್ಲಿ ಪವಮಾನ ಹೋಮ

ಮಹಿಪತಿದಾಸರು ತಪೋಗೈದ ಪುಣ್ಯಸ್ಥಳ ಮಂದಾಕಿನಿಃ ಸಂಶೋಧಕ ಭಾಸ್ಕರರಾವ್

yadgiri, ಶಹಾಪುರ: ಸಗರನಾಡಿನ ಐತಿಹಾಸಿಕ ಪರಂಪರೆ, ಧಾರ್ಮಿಕತೆಯ ನೆಲೆಯಾದ ಮಂದಾಕಿನಿ ತೀರ್ಥವಿರುವ ಹನುಮಂತ ದೇವರ ಸನ್ನಿಧಾನ ಅತ್ಯಂತ ಮಹತ್ವದಾಗಿದ್ದು, ಪೂಜ್ಯರಾದ ಮಹಿಪತಿದಾಸರು ತಪೋಗೈದ ಸ್ಥಳವು ಇದಾಗಿದೆ ಎಂದು ಇತಿಹಾಸ ಸಂಶೋಧಕರು ಹಿರಿಯ ನ್ಯಾಯವಾದಿ ಭಾಸ್ಕರರಾವ ಮುಡಬೂಳ ತಿಳಿಸಿದರು.
ಬೆಟ್ಟದ ಮಂದಾಕಿನಿಯಲ್ಲಿ ಧಾರ್ಮಿಕ ಶ್ರದ್ಧೆಯ ಯುವ ಬಳಗದಿಂದ ಮಂದಾಕಿನಿಯ ಹನುಮಂತ ದೇವರ ಸಾನಿಧ್ಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪವಮಾನ ಹೋಮ ಮತ್ತು ದಾರ್ಶನಿಕರಾದ ಮಹಿಪತಿ ದಾಸರು ತಪಸ್ಸು ಗೈದ ಪುಣ್ಯ ಸ್ಥಳಕ್ಕೆ ವಿಶೇಷ ಪೂಜೆ ಸಲ್ಲಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಪತಿ ದಾಸರು ಬಿಜಾಪುರದಿಂದ ಬಂದವರು ಕ್ರಿ.ಶ.1686ರ ಕಾಲ ಘಟ್ಟದಲ್ಲಿ ಬೆಟ್ಟದ ಮಂದಾಕಿನಿಯ ಗುಹೆಯಲ್ಲಿ ವಾಸವಾಗಿ ಪಕ್ಕದ ಸ್ಥಳದಲ್ಲಿ ಹನುಮಂತ ದೇವರನ್ನು ಪ್ರತಿಷ್ಠಾಪಿಸಿದ್ದರು ಎಂಬುದು ಇತಿಹಾಸ ಅಧ್ಯಯನದಿಂದ ತಿಳಿದು ಬರುತ್ತದೆ. ಇದರ ಜೊತೆಗೆ ಅಂದು ಸುರಪುರ ಸಂಸ್ಥಾನಕ್ಕೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಸುರಪುರ ಮನೆತನದ ಅರಸರಿಗೆ ವಿಶೇಷ ಅನುಗ್ರಹ ಮಾಡಿ, ನಾಡಿನ ಕಲ್ಯಾಣ ಬಯಸಿದ್ದರು. ಇಂತಹ ಮಹತ್ವ ಸ್ಥಳಕ್ಕೆ ಸರ್ವ ಯುವಕರ ಬಳಗ ಸೇವಾಕಾರ್ಯ ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ, ಪುರಾತತ್ವ ಇಲಾಖೆ ಐತಿಹಾಸಿಕ ಬೆಟ್ಟದ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಪಂಡಿತ ರಾಮಾಚಾರ್ಯ ಪಾಲ್ಮೂರ ಅವರಿಂದ ಪವಮಾನ ಹೋಮ, ಹನುಮಂತದೇವರ ಪೂಜಾ ಕಾರ್ಯಗಳು ಜರುಗಿದವು. ಕೋನೇರಾಚಾರ್ಯ ಸಗರÀ, ವಿಶ್ವನಾಥ ಫಿರಂಗಿ, ವೆಂಕಟೇಶ ಕುಲ್ಕರ್ಣಿ, ಅರವಿಂದ ಕುಲ್ಕರ್ಣಿ, ಸಂತೋಷ ಹಿರೇಮಠ, ಪ್ರಸಾದ ಪದಕಿ, ಮಹೇಶ ಪತ್ತಾರ, ಅಣವೀರ, ಚನ್ನಯ್ಯಸ್ವಾಮಿ, ಮಾಂತೇಶ, ರಮೇಶ, ಸುನೀಲ ಶಿರ್ಣಿ, ವೆಂಕಟೇಶ ಟೊಣಪೆ, ಅನುರಾಧ ಫಿರಂಗಿ, ವನಮಾಲ, ಭಾಗ್ಯಶ್ರೀ, ಆಶಾ, ಪ್ರಶಾಂತ ಲೋಹಾರ, ಜಗದೀಶ ಗಂಜಿ, ಅಂಬ್ರೇಶ, ನರಸಿಂಹಚಾರ್ಯ ರೊಟ್ಟಿ, ಧೀರೇಂದ್ರಚಾರ್ಯ ಭಕ್ರಿ, ಅಯ್ಯಣ್ಣ ದೇಸಾಯಿ, ರಾಘು ಹಳಿಸಗರ, ಅಮರ, ಜಿತು, ಸಿದ್ದು ಆನೇಗುಂದಿ, ಚಿದಾನಂದ, ಪವನಕುಮಾರ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button