ಜನಮನಪ್ರಮುಖ ಸುದ್ದಿ

ಸಿಡಿ ಪ್ರಕರಣ ಸತ್ಯಾಂಶ ಹೊರಬರಲಿ..!

ಸಿಡಿ ಪ್ರಕರಣ ಸತ್ಯಾಂಶ ಹೊರಬರಲಿ..!

ಕೆಲಸ‌ ಕೊಡಿಸುವ ಆಮಿಷವೊಡ್ಡಿ ಯುವತಿಯೋರ್ವಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪ ಹಿನ್ನೆಲೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೊದಲಿಗೆ ನಾನು ತಪ್ಪು ಮಾಡಿಲ್ಲ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಈ ಘಟನೆಯ ಹಿಂದೆ ಷಡ್ಯಂತರ ನಡೆದಿದೆ. ಆ ಯುವತಿ ಯಾರು ನನಗೆ ಗೊತ್ತಿಲ್ಲ. ಈ ಕುರಿತು ಸಿಎಂ ಜೊತೆ ಮಾತಾಡಿದ್ದು ಸಮಗ್ರ ತನಿಖೆಗೆ ಆಗ್ರಹಿಸಿದ್ದೇನೆ. ತನಿಖೆ ನಂತರವೇ ಸತ್ಯಾಂಶ ಹೊರಬರಲಿದೆ ಎಂದು ಮಂಗಳವಾರ  ಜಾರಕಿಹೊಳಿ ಹೇಳಿಕೆ ನೀಡಿದ್ದರು.

ಈ‌ ನಡುವೆ ವಿಪಕ್ಷಗಳ ಒತ್ತಡ ಸ್ವಪಕ್ಷಿಯರ ಸಲಹೆ ಕೇಂದ್ರದ ತಮ್ಮ ಪಕ್ಷದ ನಾಯಕರ ಸೂಚನೆ ಮೇರೆಗೆ ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೆ ಆಗಬಹುದಾದ ಮುಜುಗರ ತಪ್ಪಿಸಲು ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ.

ಇಂದು ಗುರುವಾರ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದೆ. ಈ ಸಿಡಿ ಪ್ರಕರಣ ವಿಪಕ್ಷಗಳ‌ ಕೈಗೆ ಶಕ್ತಿ ಭರಿತ ಅಸ್ತ್ರ ಸಿಕ್ಕಂತಾಗಿದೆ.

ಇಂತಹ ಪ್ರಕರಣಗಳು ರಾಜಕಾರಣದಲ್ಲಿ ಹೊಸದೇನು ಅಲ್ಲ. ಕೆಲ ದಿನಗಳವರೆಗೆ ಇದರ ಬಿಸಿ ಇರುತ್ತದೆ. ಆ ಮೇಲೆ ಪ್ರಕರಣ ಕುರಿತು ತನಿಖೆ, ಸತ್ಯಾಂಶ ಯಾವುದು ಜನರಿಗೆ ಸ್ಪಷ್ಟವಾಗಿ ತಿಳಿಯುವದಿಲ್ಲ.

ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ‌ ಬಾಗಲಕೋಟೆ ಜಿಲ್ಲೆಯಲ್ಲೂ ಆಗ ಸಚಿವರಾಗಿದ್ದ ಮೇಟಿಯವರ ರಾಸಲೀಲೆ ಸಿಡಿ ಬಿಡುಗಡೆಯಾಗಿ ದೊಡ್ಡ ಸುದ್ದಿ ಮಾಡಿತ್ತು.

ಆಗ ಇದೇ ಸಿದ್ರಾಮಯ್ಯನವರು ಸಿಎಂ ಇದ್ರು. ಮೇಟಿ ರಾಸಲೀಲೆ ಪ್ರಕರಣವು ತನಿಖೆಗೆ ಸೂಚಿಸಲಾಯಿತು. ಕೆಲ ದಿನಗಳ ನಂತರ ಕ್ಲೀನ್ ಚೀಟ್ ನೀಡಲಾಯಿತು.

ಅಲ್ಲದೆ ಬಿಜೆಪಿಯ ಶಾಸಕರು ವಿಧಾನಸೌಧ ಅಧಿವೇಶನದಲ್ಲಿಯೇ ಮೊಬೈಲ್ ನಲ್ಲಿ ಬ್ಲೂಫಿಲ್ಮಂ ನೋಡಿದ ಆರೋಪದಡಿ ರಾಜೀನಾಮೆ ನೀಡಿ ಆ ಮೇಲೆ ಕ್ಲೀನ್ ಚೀಟ್ ಪಡೆದಿದ್ದರು. ಹೀಗಾಗಿ ಇಂತಹ ಪ್ರಕರಣಗಳು ಹೀಗ್ ಬಂದು ಹಾಗ್ ಓದವು ಅನ್ನುವಂತಾಗಬಾರದು.

ಸಾರ್ವಜನಿಕ ಜೀವನದಲ್ಲಿರುವವರ ನಡತೆ ಚನ್ನಾಗಿರಬೇಕು. ಮಾದರಿಯಾಗಿರಬೇಕು ಎಂದು ಜನರ ಅಪೇಕ್ಷೆ ಸಹಜವಾದದು. ಜನರ ನಾಡಿ‌ಮಿಡಿತ ಅರಿತು ರಾಜಕಾರಣಿಗಳು ಮಾದರಿ‌ ನಡೆ ಹೊಂದಿರಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳಿಂದ ಮುಜುಗರ ಸಂಕಟ ಅನುಭವಿಸಬೇಕಾದೀತು.

ಅಲ್ಲದೆ ಪ್ರಾಮುಖ್ಯವಾಗಿ‌ ರಮೇಶ ಜಾರಕಿಹೊಳಿ ಅವರು ನೀಡಿದ್ದ ಹೇಳಿಕೆಯಂತೆ ಸಿಡಿ ಪ್ರಕರಣ ಕುರಿತು ಸಮಗ್ರ ತನಿಖೆಯಾಗಬೇಕು. ಜಾರಕಿಹೊಳಿ ಸಿಡಿ ಪ್ರಕರಣ ಹನಿ‌ ಟ್ರ್ಯಾಪ್ ನಡೆದಿದೆ ಎನ್ನಲಾಗುತ್ತಿದೆ.

ಹೀಗಾಗಿ ಈ‌ ಕುರಿತು ತನಿಖೆ ಕೈಗೊಂಡು ಶೀಘ್ರದಲ್ಲಿ ಸತ್ಯಾಂಶ ಜನತೆ ಮುಂದಿಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು‌ ಅಂದಾಗ ನ್ಯಾಯ, ಕಾನೂನಿಗಿರುವ ಶಕ್ತಿ, ಬೆಲೆ ಜನರ ಅರಿವಿಗೆ ಬರಲಿದೆ.

ಮಲ್ಲಿಕಾರ್ಜುನ ಮುದನೂರ.

ಸಂ. ವಿನಯವಾಣಿ.

Related Articles

Leave a Reply

Your email address will not be published. Required fields are marked *

Back to top button