ಪ್ರಮುಖ ಸುದ್ದಿ

ಕೊರೊನಾ ಮುಕ್ತ ಜಿಲ್ಲೆಗೆ ಪಣ -ಸಚಿವ ಆರ್.ಶಂಕರ್

ಸಂಚಾರಿ ಲಸಿಕೆ ಬಸ್‍ಗೆ ಸಚಿವ ಆರ್.ಶಂಕರ್ ಚಾಲನೆ

yadgiri, ಶಹಾಪುರಃ ಯಾದಗಿರಿ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಲಾಗಿದ್ದು, ಅದರಂತೆ ಎಲ್ಲಾ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ತಿಳಿಸಿದರು.

ನಗರದ ಕೃಷಿ ಮಾರುಕಟ್ಟೆಯಲ್ಲಿ ಸಂಚಾರಿ ವ್ಯಾಕ್ಸಿನ್ ಬಸ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ತಿಂಗಳಿಂದ ಎರಡನೇ ಅಲೆಯ ಕೊರೊನಾ ಆರ್ಭಟ ತೀವ್ರತೆ ಉಂಟಾಗಿದ್ದು, ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ದಿನಕ್ಕೆ 500 ರಿಂದ 700 ಗಡಿ ದಾಟಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು.

ಸಮರ್ಪಕ ಲಾಕ್ ಡೌನ್ ವ್ಯವಸ್ಥೆಯಿಂದಾಗಿ ಇದೀಗ ಸೋಂಕಿತರ ಸಂಖ್ಯೆ 200 ಕ್ಕೆ ಇಳಿದಿದ್ದು, ಜಿಲ್ಲಾ ಮತ್ತು ಆಯಾ ತಾಲೂಕು ಆಡಳಿತ, ಎಲ್ಲಾ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸೇರಿದಂತೆ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳ ಪರಿಶ್ರಮ ಮತ್ತು ಪತ್ರಕರ್ತರು ಇತರೆ ಇಲಾಖೆಯ ನೌಕರರ ಸಹಕಾರದಿಂದ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿರುವದು ಸಮಧಾನಕರವಾಗಿದೆ.

ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಜೂನ್ 7 ರೊಳಗೆ ಕೊರೊನಾ ನಿಯಂತ್ರಣಕ್ಕೆ ಬರಲಿದೆ. ತದನಂತರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಾಗುವುದು. ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ಪಕ್ಷ ಬೇಧ ಮರೆತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರ ಮನೋಭಾವದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಈರಣ್ಣ ಸಾಹು ಮೊದಲಿಗೆ ಸಂಚಾರಿ ಬಸ್‍ನಲ್ಲಿ ವ್ಯಾಕ್ಸಿನ್ ಪಡೆದರು. ಮತ್ತು ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಅಂಗವಿಕಲರಿಗಾಗಿ ನಿರ್ಮಿಸಲಾದ ವಿಶೇಷ ಲಸಿಕಾ ಕೇಂದ್ರವನ್ನು ಸಚಿವರು ಉದ್ಘಾಟಿಸಿದರು.

ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕÀ ಗುರು ಪಾಟೀಲ್ ಶಿರವಾಳ, ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಎಸ್ಪಿ ಸಿ.ಬಿ.ವೇದಮೂರ್ತಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಿಎಚ್‍ಒ ಡಾ.ಇಂದುಮತಿ ಕಾಮಶೆಟ್ಟಿ, ಎಸಿ ಶಂಕರಗೌಡ ಸೋಮನಾಳ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಟಿಎಚ್‍ಒ ಡಾ.ರಮೇಶ ಗುತ್ತೇದಾರ ಇತರರಿದ್ದರು.

ಸಮರ್ಥ ಅಧಿಕಾರಿಗೆ ಹೆಚ್ಚಿನ ಜವಬ್ದಾರಿ ನೀಡುವಲ್ಲಿ ತಪ್ಪಿಲ್ಲ-ಆರ್.ಶಂಕರ್

ಶಹಾಪುರಃ ಕೋವಿಡ್ ಸಂದರ್ಭದಲ್ಲಿ ಸಮರ್ಪಕವಾಗಿ ಜವಬ್ದಾರಿ ನಿಭಾಯಿಸದ ವ್ಯಕ್ತಿಯನ್ನು ತೆಗೆದು ಸಮರ್ಥವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮತ್ತೋರ್ವ ಅಧಿಕಾರಿಗೆ ಜವಬ್ದಾರಿ ನೀಡುವದರಲ್ಲಿ ತಪ್ಪೇನು ಇಲ್ಲ. ಅದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಯಾವ ರೀತಿ ನ್ಯೂನತೆಯನ್ನು ಸರಿ ಪಡಿಸಿಕೊಳ್ಳಬೇಕೆಂಬುದನ್ನು ಮನಗಂಡು ಅವರು ಅಧಿಕಾರ ನೀಡಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ತಿಳಿಸಿದರು.
ಅವರು ಪತ್ರಕರ್ತರು ಕೇಳಿದ ನಗರದ ಸರ್ಕಾರಿ ಆಸ್ಪತ್ರೆ ಟಿಎಚ್‍ಒ ಡಾ.ರಮೇಶ ಗುತ್ತೇದಾರ ಅವರಿಗೆ ತಾಲೂಕಿನ ಆರೊಗ್ಯ ಇಲಾಖೆ ವ್ಯಾಪ್ತಿಯ 9 ಹುದ್ದೆಗಳನ್ನು ಪ್ರಭಾರಿಯಾಗಿ ಜವಬ್ದಾರಿ ನೀಡಿದ್ದು, ಅವರೊಬ್ಬರೆ ಅಷ್ಟೊಂದು ಹುದ್ದೆ ನಿಭಾಯಿಸಬಲ್ಲರೇ.? ಎಂಬ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದರು.

ರಾಜಕಾರಣದಲ್ಲಿ ಯಾವುದೇ ಗೊಂದಲವಿಲ್ಲ. ಯಾರಾದರೂ ದೆಹಲಿಗೆ ಹೋದರೆ ಉಹಾಪೋಹ ಎಬ್ಬಿಸುವದು ಸರಿಯಲ್ಲ. ಬಿಎಸ್‍ವೈ ಸಮರ್ಥ ರಾಜಕಾರಣಿ. ಇನ್ನೆರಡು ವರ್ಷ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ. ಇನ್ನೂ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್, ವೆಂಟಿಲೇಟರ್ ಕೊರತೆ ಇರುವದಿಲ್ಲ. ಬೆಡ್ ವ್ಯವಸ್ಥೆಯು ಇದೆ.

ಆರ್.ಶಂಕರ್. ಉಸ್ತುವಾರಿ ಸಚಿವರು. ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button