ಪ್ರಮುಖ ಸುದ್ದಿ
ಮರಳು ಉಚಿತ ಆದರೆ ಮನೆ ಕಟ್ಟಲು ಮಾತ್ರ ಮಾರಾಟಕ್ಕಲ್ಲ – ಹೊಸ ನೀತಿ ಜಾರಿಗೆ ಸಿದ್ಧತೆ
ಶುಭ ಸುದ್ದಿಃ ಗ್ರಾಮೀಣ ಜನತೆಗೆ ಮರಳು ಉಚಿತ, ಟ್ರ್ಯಾಕ್ಟರ್, ಬಂಡೆಯಲ್ಲಿ ಮರಳು ಒಯ್ಯಬಹುದು..!
ವಿವಿ ಡೆಸ್ಕ್ಃ ರಾಜ್ಯದ ಗ್ರಾಮೀಣ ಭಾಗದ ಜನರು ಸ್ವಂತ ಮನೆ ಕಟ್ಟಲು, ಯಾವುದೆ ಕಟ್ಟಡ ಕಟ್ಟಲು ಮರಳನ್ನು ಉಚಿತವಾಗಿ ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಲು ಮುಂದಾಗಿದೆ.
ಇದಕ್ಕೆ ಮರಳು ಸಾಗಾಣೆಕೆಗೆ ನಿಯಮಗಳನ್ನು ರೂಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರಗೇಶ ನಿರಾಣಿ ಮಾಹಿತಿ ನೀಡಿದ್ದಾರೆ.
ಸ್ವಂತ ಮನೆಅಥವಾ ಕಟ್ಟಡ ನಿರ್ಮಾಣಕ್ಕೆ ಮಾತ್ರ ಮರಳನ್ನು ಬಳಸಬೇಕು. ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ ಅಥವಾ ಟ್ರ್ಯಾಕ್ಟರ್, ಕತ್ತೆಗಳ ಮೂಲಕ ಹಳ್ಳ ಕೊಳ್ಳ, ತೊರೆಗಳಲ್ಲಿ ಇರುವ ಮರಳು ತೆಗೆದುಕೊಂಡು ಹೋಗಲು ನೂತನ ನೀತಿಯನ್ನು ಜಾರಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.