ಪ್ರಮುಖ ಸುದ್ದಿ

ಶಹಾಪುರ ನಗರಸಭೆ ಅಲ್ಲ ನರಕಸಭೆ – ಭೀಮಾಶಂಕರ ಕಟ್ಟಿಮನಿ ಆಕ್ರೋಶ

ಪೌರ ಕಾರ್ಮಿಕರ ಹಣ ಲಪಟಾಯಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ

ಶಹಾಪುರ ನಗರಸಭೆ ಅಲ್ಲ ನರಕಸಭೆ – ಭೀಮಾಶಂಕರ ಕಟ್ಟಿಮನಿ

ಪೌರ ಕಾರ್ಮಿಕರ ಹಣ ಲಪಟಾಯಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ

ಯಾದಗಿರಿಃ ಜಿಲ್ಲೆಯ ಶಹಾಪುರ ನಗರಸಭೆಯಲ್ಲಿ ಕೆಲಸ ಮಾಡುವ ‘ಡಿ’ ಗ್ರೂಪ್ ಪೌರ ಕಾರ್ಮಿಕರ ಇಪಿಎಫ್, ಇಎಸ್ ಐ ಹಣ ಲಪಟಾಯಿಸಿ ಮತ್ತು ನ್ಯಾಯಯುತ ಬೇಡಿಕೆಗಾಗಿ ಹೋರಾಟಕ್ಕೆ ಮುಂದಾದ ಇಬ್ಬರನ್ನು ಬೇರಡೆ ನಿಯೋಜಿಸುವ ಮೂಲಕ ಇನ್ನುಳಿದ ಕಾರ್ಮಿಕರಿಗೆ ಬೆದರಿಕೆವೊಡ್ಡುವ ನಗರಸಭೆ ಅಧಿಕಾರಿಗಳ ನಡೆ ಖಂಡಿಸಿ ಮತ್ತು ಕಾರ್ಮಿಕರ ಇಪಿಎಫ್ ಹಣ ಎಲ್ಲಿಗೆ ಹೋಯಿತು.? ಅದನ್ನು ಕಬಳಿಸಿದವರಾರು.? ಕೂಡಲೇ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಶಹಾಪುರ ನಗರಸಭೆ ಮುಂದೆ ಎರಡು ದಿನದಿಂದ ಆಹೋರಾತ್ರಿ ಧರಣಿ ಮುಂದುವರೆದಿದೆ.

ನಗರಸಭೆ ಕಾರ್ಮಿಕರು ಕೈಗೊಂಡ ಧರಣಿಗೆ ಬೆಂಬಲ ಸೂಚಿಸಿ ಎರಡು ದಿನದಿಂದ ಧರಣಿಯಲ್ಲಿ ಭಾಗವಹಿಸಿದ ಕಲ್ಯಾಣ ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಮಾತನಾಡಿ, ಇದು ನಗರಸಭೆಯಲ್ಲ ನರಕಸಭೆ ಆಗಿದೆ. ನಗರಸಭೆಯಲ್ಲಿ ಬೆಳಗಿನ ಜಾವ 4 ಗಂಟೆಗೆ ಬಂದು, ನಗರದ ಚರಂಡಿಗೆ ಇಳಿದು ಸಫಾಯಿ ಕೆಲಸ ಮಾಡುವ ಕಾರ್ಮಿಕ ಮೇಲೆ ದೌರ್ಜನ್ಯ ನಡೆಸುವ ಇಲ್ಲಿನ ಅಧಿಕಾರಿಗಳಿಂದ ಇದು ನರಕಸಭೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಪೌರ ನೌಕರರ ವೇತನದಡಿ ಪ್ರತಿ ತಿಂಗಳು ಕಡಿತಗೊಳಿಸಿದ ಹಣ ಇಪಿಎಫ್ ಇಲಾಖೆಗೆ ಜಮೆಯಾಗಬೇಕಿತ್ತು ಕಳೆದ 6-7 ವರ್ಷದಿಂದ ಇಪಿಎಫ್ ಹಣ ಜಮೆಯಾಗದಿರುವ ಕಾರಣವಾದರೂ ಏನು.? ಆ ಹಣ ಯಾರು ಲಪಟಾಯಿಸಿರುವದು.? ಪ್ರಸ್ತುತ ಕಾರ್ಮಿಕರು ಮನೆಯಲ್ಲಿ ‌ಮದುವೆ ಮುಂಜಿ ಇತರೆ ಕಾರ್ಯಗಳಿಗೆ ಇಪಿಎಫ್ ಹಣ ಪಡೆಯಲು ಹೋದರೆ ಅಲ್ಲಿ ಕಾರ್ಮಿಕರ ಹಣ ಜಮೆಯಾಗಿಲ್ಲ. ಹಾಗಾದರೆ ಪ್ರತಿ ತಿಂಗಳು ಕಾರ್ಮಿಕ‌ರ ವೇತನದಲ್ಲಿ ಕಡಿತಗೊಳಿಸಿದ ಹಣ ಎಲ್ಲಿಗೆ ಹೋಯಿತು.? ಆ ಹಣ ತಿಂದವರಾರು.? ಅದೇ ರೀತಿ ಇಎಸ್‌ಐ ಕಾರ್ಡ್ ಇದುವರೆಗೂ ವಿತರಣೆ ಮಾಡಿರುವದಿಲ್ಲ.

ಕಾರ್ಮಿಕರಾಗಲಿ ಅವರ ಕುಟುಂಬಸ್ಥರು ಅನಾರೋಗ್ಯಕ್ಕೀಡಾದಾಗ ಇಎಸ್ ಐ ಕಾರ್ಡ್ ಇದ್ದಲ್ಲಿ ಉಚಿತ ಚಿಕಿತ್ಸೆ ಜತೆ ಇನ್ಸೂರೆನ್ಸ್ ಪಡೆಯಬಹುದು. ಆಕಸ್ಮಿಕವಾಗಿ ಆಸ್ಪತ್ರೆಯಲ್ಲಾಗಲಿ, ಅಪಘಾತವಗಲಿ ಮೃತಪಟ್ಟರೆ, ಇಎಸ್ ಐ ಕಾರ್ಡ್ ಇದ್ದರೆ ಸಮರ್ಪಕ ಅಂದಾಜು  5 ಲಕ್ಷವರೆಗೆ ಅವರ ಕುಟುಂಬಕ್ಕೆ‌ ಪರಿಹಾರ ಸಿಗಲಿದೆ. ಕಳೆದ ವರ್ಷ ಒಂದಿಬ್ಬರು ಕಾರ್ಮಿಕರು ಅನಾರೋಗ್ಯ ಕಾರಣದಿಂದ‌ ಮೃತಪಟ್ಟಿದ್ದು, ಇಎಸ್ಐ ಕಾರ್ಡ್ ಮಾಡದೆ ಇರುವದರಿಂದ ಅವರಿಗೆ ಯಾವುದೆ ಪರಿಹಾರ ದೊರೆಯಲಿಲ್ಲ ಅದಕ್ಕೆಲ್ಲ‌ಇದೇ ಅಧಿಕಾರಿಗಳು ಹೊಣೆ.‌ ಅಷ್ಟಾದರೂ ಇಎಸ್ ಐ ಕಾರ್ಡ್ ಮಾಡಿಸಲು ದಿನ ಮುಂದೂಡವ ಅಧಿಕಾರಿಗಳಿಂದ ಕಾರ್ಮಿಕರ ಬದುಕು ನರಕಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು.

ಅಲ್ಲದೆ ಇಎಸ್ ಐ ಹಣವು ಪ್ರತಿ ತಿಂಗಳು ಹಣ ಕಡಿತಗೊಳಿಸಿದ್ದು, ಆ ಹಣವು ಎಲಿಗೆ ಹೋಯಿತು.? ಈ ಅನ್ಯಾಯವನ್ನು ಶೀಘ್ರದಲ್ಲಿ ಇತ್ಯರ್ಥ‌ಪಡಿಸಬೇಕು. ಅಧಿಕಾರಿಗಳು ನಡೆಸಿದ ಅವ್ಯವಹಾರದಿಂದ ಕಾರ್ಮಿಕರ‌ ದುಡ್ಟು ಲಪಟಾಯಿಸಿರುವದನ್ನು ಮರೆ‌ಮಾಚಲು ಕಾರ್ಮಿಕ‌ ಮುಖಂಡರಿಬ್ಬರ‌ ಮೇಲೆ ಪೌರಾಯಕ್ತ ರಮೇಶ ಬಡಿಗೇರ ಮತ್ತು ಪರಿಸರ ಅಭಿಯಂತರ ಹರೀಶ್ ಸಜ್ಜನ್ ಕಾರ್ಮಿಕರ ಮೇಲೆಯೇ ದರ್ಪ ತೋರುತ್ತಿದ್ದಾರಲ್ಲದೆ, ಎಲ್ಲಾ ಕಾರ್ಮಿಕರಿಂದ‌ ಇಪಿಎಫ್ ಮತ್ತು ಇಎಸ್ ಐ ಹಣ‌‌ ಮರಳಿಸುವ ಮೂಲಕ‌ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಇಂದು ನಗರಸಭೆ ಸದಸ್ಯರಾದ ಅಶೋಕ ನಾಯಕ, ಅಪ್ಪಣ್ಣ ದಶವಂತ, ಮಹೇಶ ಮಡಿವಾಳಕರ್, ಸತೀಶ ಪಂಚಭಾವಿ ಮತ್ತು ಸುನೀಲಕುಮಾರ ಗಣಚಾರಿ ಧರಣಿನಿರತರಿಗೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದರು.

ಧರಣಿಗೆ ವಿವಿಧ ಸಂಘಟನೆಗಳ ಮುಖಂಡರ‌ ವ್ಯಾಪಕ ಬೆಂಬಲ

ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಬಸ್ಸು ನಾಟೇಕಾರ, ಕರ್ನಾಟಕ ಜನಾಭಿವೃದ್ಧಿಯ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ ಯಾದವ್, ಲಂಚಮುಕ್ತ ನಿರ್ಮಾಣ ವೇದಿಕೆ ಉಪಾಧ್ಯಕ್ಷ ಇಸ್ಮಾಯಿಲ್, ಅಂಗವಿಕಲ ಸಂಘಟನೆಯ ಸುಭಾಷ ಹೋತಪೇಠ, ನಮ್ಮ ಕರ್ನಾಟಕ ಸೇನೆಯ ಭಾಗಪ್ಪ ಯಾದವ್, ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಅಭಿವೃದ್ಧಿ ಸಂಘ ಅಧ್ಯಕ್ಷ ಹಯ್ಯಾಳಪ್ಪ ಅಚ್ಚಿಕೇರಿ, ಕಾರ್ಮಿಕರ ವೇದಿಕೆ ಅಧ್ಯಕ್ಷ ಆನಂದ ಟೈಗರ್, ಕೃಷಿ ಸಂಘದ ಜಿಲ್ಲಾಧ್ಯಕ್ಷ ಭೀಮನಗೌಡ ಕಟ್ಟಿಮನಿ, ಶ್ರೀರಾಮ ಸೇನೆಯ ಶಿವಕುಮಾರ ಶಿರವಾಳ, ಸರ್ವಜ್ಞ ಗ್ರಾಮೀಣ ಸೇವಾ ಸಂಸ್ಥೆಯ ಸಂಗಮೇಶ ಕುಂಬಾರ, ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಪ್ರದೀಪ ಅಣಬಿ‌ ಮತ್ತು ಕಕ ಯುವ ಸೇನೆ ತಾಲೂಕು ಅಧ್ಯಕ್ಷ ಕಾಳಪ್ಪ ಹಳಿಸಗರ ಇತರರು ಪೌರ ಕಾರ್ಮಿಕರ ಧರಣಿಗೆ ಬೆಂಬಲ ಸೂಚಿಸಿದ್ದಾರೆ.

 

ನಿನ್ನೆ ರಾತ್ರಿಯಾದರೂ ಧರಣಿ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದ್ದು, ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಜಿಲ್ಲಾಧಿಕಾರಿಗಳಿಗೆ ಎಲ್ಲವೂ ಮಾಹಿತಿ ನೀಡಲಾಗಿದ್ದು, ಸ್ವತಃ ಅವರೇ ಸ್ಥಳಕ್ಕಾಗಮಿಸಿ ಕಾರ್ಮಿಕರಿಗಾದ ಅನ್ಯಾಯ ಸರಿಪಡಿಸಬೇಕು. ವಿನಾಕಾರಣ ಪೌರ ನೌಕರರ ಸಂಘದ‌ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯನ್ನು ಬೇರೆ ನಿಯೋಜಿಸಿರುವದನ್ನು ರದ್ದು ಪಡಿಸುವ ಮೂಲಕ ಸಮರ್ಪಕ‌ ಬೇಡಿಕೆ ಈಡೇರಿಸಬೇಕು. ಅಲ್ಲಿ ವರೆಗೂ ನಿರಂತರ ಧರಣಿ ಮುಂದುವರೆಯಲಿದೆ.

-ಭೀಮಾಶಂಕರ ಕಟ್ಟಿಮನಿ. ಜಿಲ್ಲಾಧ್ಯಕ್ಷರು- ಕಕಸೇನೆ ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button