ಪ್ರಮುಖ ಸುದ್ದಿ
ಮಾಜಿ ಕೇಂದ್ರ ಸಚಿವ ಜೈಪಾಲರೆಡ್ಡಿ ಇನ್ನಿಲ್ಲ!
ಹೈದರಾಬಾದ್: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಸ್ .ಜೈಪಾಲ್ ರೆಡ್ಡಿ (77) ಶನಿವಾರ ಮಧ್ಯರಾತ್ರಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ಬಾರಿ ಸಂಸದರಾಗಿದ್ದ ಅವರು ಐ.ಕೆ.ಗುಜ್ರಾಲ್ ಹಾಗೂ ಡಾ.ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಪೆಟ್ರೋಲಿಯಂ ಸಚಿವರಾಗಿ ಸೇವೆ ಸಲ್ಲಿಸಿದ್ರು. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.