ಪ್ರಮುಖ ಸುದ್ದಿ
ಕಲಬುರ್ಗಿ: ಮಠಕ್ಕೆ ಕನ್ನ ಹಾಕಿ ದೇವರಮೂರ್ತಿ ಕದ್ದ ಕಳ್ಳರು!
25 ಕೆಜಿ ತೂಕದ ಪಂಚಲೋಹದ ವಿಗ್ರಹ ಕಳುವು
ಕಲಬುರಗಿಃ ದೇವಸ್ಥಾನದ ಬೀಗ ಮುರಿದು 25 ಕೆಜಿ ತೂಕದ ಪಂಚಲೋಹದ ವಿಗ್ರಹ ಕಳುವು ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡ್ ಮುಗಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಗ್ರಾಮದಲ್ಲಿರುವ ವಿರುಪಾಕ್ಷೇಶ್ವರ ಮಠದೊಳಗಿರುವ ದೇವಸ್ಥಾನದ ಬೀಗ ಮುರಿದು ವಿರುಪಾಕ್ಷೇಶ್ವರ ಮೂರ್ತಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ನಿನ್ನೆ ತಡ ರಾತ್ರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಯಾರಿಗೂ ಸಂಶಯ ಬಾರದ ಹಾಗೇ ತಮ್ಮ ಕೈಚಳಕದಿಂದ ಬೀಗ ಮುರಿದು ಇಪ್ಪತ್ತೈದು ಕಿಲೋ ಗ್ರಾಮ ತೂಕದ ಪಂಚಲೋಹದ ಮೂರ್ತಿ ಒಯ್ದಿದ್ದಾರೆ ಎನ್ನಲಾಗಿದೆ.
ಇಂದು ಬೆಳಗಿನಜಾವ ಗ್ರಾಮದ ಮಧ್ಯಬಾಗದಲ್ಲಿರುವ ವಿರುಪಾಕ್ಷೇಶ್ವರ ಮಠದಲ್ಲಿನ ದೇವರ ಮೂರ್ತಿ ಕಳುವಾಗಿದೆ ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Supper ri vinayavani
Thank u..