ಪ್ರಮುಖ ಸುದ್ದಿ
ಆಮ್ಲಜನಕ ಸ್ಥಗಿತ; 30ಮಕ್ಕಳು ಸಾವು…!
ಮುಖ್ಯಮಂತ್ರಿಯ ತವರಲ್ಲೇ ಮಹಾದುರಂತ
ಉತ್ತರಪ್ರದೇಶದ ಗೋರಖಪುರದ ಬಿಆರ್ ಡಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಿಕ ಪೂರೈಕೆ ಸ್ಥಗಿತಗೊಂಡಿದೆ. ಪರಿಣಾಮ ಮೂರು ದಿನಗಳಲ್ಲಿ 30 ಮಕ್ಕಳು ಸಾವನಪ್ಪಿದ ದುರ್ಘಟನೆ ನಡೆದಿದೆ. ಆಸ್ಪತ್ರೆಯಿಂದ ಹಣ ಪಾವತಿಸದ ಕಾರಣಕ್ಕೆ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದಷ್ಟೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗೋರಖಪುರ ಸಿಎಂ ಆದಿತ್ಯನಾಥ್ ಅವರ ಸ್ವಕ್ಷೇತ್ರವಾಗಿದೆ. ಸಿಎಂ ಸ್ವಕ್ಷೇತ್ರದಲ್ಲೇ ಮಹಾದುರಂತ ನಡೆದಿದ್ದು ಆರೋಗ್ಯ ಇಲಾಖೆಯ ಸುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಬೇಜವಬ್ದಾರಿ ತೋರಿ ಅಮಾಯಕ ಮಕ್ಕಳ ಪ್ರಾಣಹಾನಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಘಟನೆ ಮರುಕಳಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅನ್ನುವುದು ಸ್ಥಳೀಯರ ಆಗ್ರಹವಾಗಿದೆ.