ಶಹಾಪುರಃ ವರ್ತಕರು V/S ನಗರಸಭೆ ಅಧಿಕಾರಿ ಬಿಗ್ ಫೈಟ್
ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಅಗತ್ಯಃ ನಾಗರಿಕರ ಅಂಬೋಣ
yadgiri, ಶಹಾಪುರಃ ನಗರದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಅವಿರತ ಶ್ರಮವಹಿಸಿದ್ದ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ಅವರ ಮೇಲೆ ವರ್ತಕರ ಸಂಘ ತಿರುಗಿ ಬಿದ್ದಂತೆ ಕಾಣುತ್ತಿದೆ. ಮೊನ್ನೆ ಕಿರಾಣಿ ವರ್ತಕರ ಮಧ್ಯೆಯೇ ಅಂಗಡಿ ಓಪನ್ ಹಿನ್ನೆಲೆ ನಡೆದ ಗಲಾಟೆ ದೀರ್ಘ ಹಂತ ತಲುಪಿದ್ದು, ಇದೀಗ ವರ್ತಕರು ಪೌರಾಯುಕ್ತರ ತಲೆದಂಡಕ್ಕೆ ಬೇಡಿಕೆ ಇಟ್ಟಿದ್ದರೆ, ಡಿಎಸ್‍ಎಸ್ ಸಂಘಟನೆಗಳ ಪ್ರಮುಖರು ದಲಿತ ಅಧಿಕಾರಿಗಳನ್ನೆ ಟಾರ್ಗೆಟ್ ಮಾಡುತ್ತಿದ್ದು, ವರ್ತಕರು ನಡೆಸುತ್ತಿರುವ ಪ್ರತಿಭಟನೆ ಹಿಂದೆ ಕಾಣದ ಕೈಗಳಿವೆ ಎಂದು ಆರೋಪ ಪ್ರತ್ಯಾರೋಪ ಪ್ರತಿಭಟನೆಗಳು ನಡೆದಿವೆ.

ಶಹಾಪುರ ನಗರದಲ್ಲಿ ಈ ಘಟನೆ ತೀವ್ರ ಚರ್ಚೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಇದ್ಯಾವ ಹಂತ ತಲುಪಲಿದೆ ಎಂಬುದು ಕಾದು ನೋಡಬೇಕಿದೆ. ಸೋಮವಾರ ನಗರದಲ್ಲಿ ಪ್ರತ್ಯೇಕವಾಗ ವರ್ತಕರ ಸಂಘ ಪೌರಾಯುಕ್ತ ರಮೇಶ ಪಟ್ಟೇದಾರ ವಿರುದ್ಧ ಕ್ರಮ ಒತ್ತಾಯಿಸಿ ಮನವಿ ಸಲ್ಲಿಸಿದೆ. ಇದೇ ವೇಳೆ ಸಹಸೀಲ್ ಕಚೇರಿ ಎದುರು ಡಿಎಸ್‍ಎಸ್ ಸಂಘಟನೆಗಳ ಪ್ರಮುಖರು ರಮೇಶ ಪಟ್ಟೇದಾರ ಓರ್ವ ದಲಿತರಾಗಿದ್ದು, ಕೋವಿಡ್ ನಿಯಮನುಸಾರ ನಿಗದಿತ ವೇಳೆ ಮೀರಿ ಅಂಗಡಿ ಮುಂಗಟ್ಟುಗಳು ತೆರೆಯದಂತೆ ನೋಡಿಕೊಳ್ಳುತ್ತಿದ್ದು, ಯಾವುದೇ ಅಂಗಡಿಗಳು ತೆರೆದಲ್ಲಿ ದಂಡ ವಿಧಿಸುತ್ತಿದ್ದಾರೆ.
ಅಂತಹ ಅಧಿಕಾರಿಗಳ ವಿರುದ್ಧ ವರ್ತಕರು ವಯಕ್ತಿಕ ವಿಷಯವನ್ನು ಎಳೆ ತಂದು ಪೌರಾಯುಕ್ತರ ಮೇಲೆ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರೆ, ವರ್ತಕರು ಹೇಳುವುದೇ ಬೇರೆ ಇದೆ. ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ ಒದಗಿಸುವಲ್ಲಿ ನಗರಸಭೆ ಅಧಿಕಾರಿ ಸಿದ್ಧಹಸ್ತರಾಗಿದ್ದು, ವರ್ತಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಪ್ರಬಲ ಆರೋಪ ಮಾಡುತ್ತಿದ್ದು, ಕೂಡಲೇ ಪೌರಾಯುಕ್ತರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಪೌರಾಯುಕ್ತರ ವಿರುದ್ಧ ಸ್ಥಳೀಯ ಪ್ರಬಲ ಮುಖಂಡರೊಬ್ಬರು ಆರೋಪ ಮಾಡಿದ್ದು, ಕೂಡಲೇ ಅವರನ್ನು ವಜಾಗೊಳಿಸಲು ಮನವಿ ಮಾಡಿದ್ದಾರೆ. ಆದರೆ ದಲಿತ ಮುಖಂಡರು, ಕೋವಿಡ್ ವೇಳೆ ಜೀವದ ಹಂಗು ತೊರೆದು ಹಗಲು ರಾತ್ರಿ ದುಡಿಯುವ ಅಧಿಕಾರಿ ವಿರುದ್ಧ ಇಲ್ಲದ ಆರೋಪ ಹೊರಿಸುವದು ತರವಲ್ಲ ಎಂದು ದೂರಿದ್ದಾರೆ.
ಡಿಎಸ್‍ಎಸ್ ಸಂಘಟನೆ ಪ್ರಮುಖರು ಹಾಗೂ ವರ್ತಕರ ಸಂಘ ಎರಡು ಸಂಘಟನೆಗಳು ತಮ್ಮ ಬೇಡಿಕೆಗೆ ಪ್ರಮುಖ ಪಾತ್ರವಹಿಸಿ ಪಟ್ಟು ಹಿಡಿದಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸೂಕ್ತ ನಿರ್ಣಯಕೈಗೊಳ್ಳುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕೆಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.