ಪ್ರತಿಪಕ್ಷಗಳು ಮನೋಭಾವ ಬದಲಿಸಿಕೊಳ್ಳಲಿ- ಕೋಟ ಶ್ರೀನಿವಾಸ

ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಜಿಲ್ಲಾ ಬಿಜೆಪಿಯಿಂದ ಸನ್ಮಾನ
ಯಾದಗಿರಿ: ಪ್ರತಿಪಕ್ಷ ನಾಯಕರು ಸರಕಾರಕ್ಕೆ ಆಗಾಗ ಸರ್ಟಿಫಿಕೇಟ್ ಕೊಡುತ್ತಿರುತ್ತಾರೆ. ಪ್ರತಿಪಕ್ಷದವರು ಏನೇ ಹೇಳಿದರೂ ಜನಾಶೀರ್ವಾದ ನಮಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅವರು ತಾಲಿಬಾನ್‍ನ್ನು ಪ್ರೀತಿಸುವವರು, ಅಪ್ಘಾನಿಸ್ತಾನದ ಈಗಿನ ಆಡಳಿತವನ್ನು ಬೆಂಬಲಿಸುತ್ತಿದ್ದು, ಅಲ್ಲಿನ ಬಡವರು, ಮುಗ್ಧರು, ಮಕ್ಕಳು, ಮಹಿಳೆಯರ ಸ್ಥಿತಿಯನ್ನೊಮ್ಮೆ ನೋಡಿ ಪ್ರತಿಪಕ್ಷಗಳು ಮನೋಭಾವ ಬದಲಾಯಿಸಿಕೊಳ್ಳಲಿ ಎಂದು ಹೇಳಿದರು.
ಪ್ರತಿಭಟನೆ ಮಾಡುತ್ತಿರುವವರು ರೈತರೇ.? ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ಮತ್ತು ಎಪಿಎಂಸಿ ಕಾಯ್ದೆಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಳ್ಳದೆ ಪ್ರತಿಭಟನೆ ಮಾಡುತ್ತಿದ್ದಾರೆ.
ನಿಜವಾದ ರೈತರು ಹೊಲ ಗದ್ದೆಯಲ್ಲಿದ್ದಾರೆ, ರೈತರಿಗೋಸ್ಕರ ಕೇಂದ್ರ ಸರಕಾರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅರ್ಜಿ ಕೊಡದೆ ಸೌಲಭ್ಯ ಒದಗಿಸುತ್ತಿದೆ ಮತ್ತು ರೈತಗಾಗಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಆರು ಸಾವಿರ ಮತ್ತು ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ಕೊಡಲಾಗುತ್ತೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟಿಲ್, ಮಾಜಿ ಶಾಸಕ ಡಾ.ವಿರಬಸವಂತರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಬಿ.ಗುಡಿ.ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಸಾಯಿಬಣ್ಣ ಬೋರಬೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ನಗರ ಮಂಡಲ ಅಧ್ಯಕ್ಷ ಸುರೇಶ್ ಅಂಬಿಗೇರ, ಯುಡ ಅಧ್ಯಕ್ಷ ಬಸುರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಸ್ವಾಗತಿಸಿದರು, ಇನ್ನೋರ್ವ ಜಿಪ್ರಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರ ನಿರೂಪಿಸಿದರು. ಮತ್ತು ವಿವಿಧ ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.