ದೈವೇಚ್ಛೆಗೆ ಶರಣಾಗುವುದೇ ಲೇಸು ಈ ಕಥೆ ಓದಿ
ದಿನಕ್ಕೊಂದು ಕಥೆ
ಬ್ರಹ್ಮನ ಬುದ್ಧಿವಂತಿಕೆ
ಒಂದು ಕಾಡು. ಅಲ್ಲಿ ಒಂದು ಹಂಸ, ಕೋಳಿ ಮತ್ತು ಬಾತುಕೋಳಿ ಇದ್ದವು. ಅವಕ್ಕೆ ತಮ್ಮ ರೂಪದ ಬಗ್ಗೆ ಎಳ್ಳಷ್ಟೂ ಸಂತೋಷವಿರಲಿಲ್ಲ.
ಬಾತು ಕೋಳಿ ಹೇಳುತ್ತಿತ್ತು – ‘ಅಯ್ಯೋ, ನನಗೆ ಬ್ರಹ್ಮನ ಬಗ್ಗೆ ತುಂಬಾ ಸಿಟ್ಟು ಬರುತ್ತೆ. ನನ್ನ ಕಾಲುಗಳೇ ಬಲವಿಲ್ಲ, ವೇಗವಾಗಿ ಓಡಲಾರೆ, ಪದರು ಪದರಾಗಿರುವ ಕಾಲುಗಳು …. ಥೂ ನನಗೆ ನಾಚಿಕೆಯಾಗುತ್ತೆ .
ಕೋಳಿ ಹೇಳುತ್ತಿತ್ತು – ‘ನನ್ನ ಧ್ವನಿಯೋ ವಿಕಾರವಾಗಿದೆ. ಮುರಿದ ಕೊಳಲು ಬಾರಿಸಿದಂತೆ ನನ್ನ ಧ್ವನಿ ಇದೆ. ಛೇ !’
ಹಂಸವು ಹೇಳುತ್ತಿತ್ತು – ‘ನನ್ನ ಶರೀರದ ಮೇಲೆ ಎಷ್ಟೊಂದು ರೋಮವಿದೆ. ಅದೊಂದು ಭಾರ ನನಗೆ’.
ಹೀಗೆ ಮೂರೂ ಬ್ರಹ್ಮನಿಗೆ ಶಾಪ ಹಾಕುತ್ತಿದ್ದುವು. ಒಂದು ದಿನ ಬ್ರಹ್ಮ ಇವುಗಳ ಅಹವಾಲು ಕೇಳ ‘ನಾಳೆ ಮುಂಜಾನೆ ಸೂರ್ಯ ಹುಟ್ಟುವುದಕ್ಕೂ ಮೊದಲು ಪೂರ್ವಮುಖ ಮಾಡಿ ಪ್ರಾರ್ಥಿಸಿ, ನಿಮ್ಮಾಸೆಯಂತೆ ಆಗುವುದು’ ಎಂದ.
ಮೂರನೆಯ ದಿನ ಅದ್ಭುತ ಬದಲಾವಣೆ ಆಗಿತ್ತು. ಹಂಸದ ಮೈಮೇಲೆ ರೋಮವಿಲ್ಲ. ಕೋಳಿ ಕಂಠ ಮಧುರವಾಗಿದೆ, ಬಾತುಕೋಳಿಗೆ ಉದ್ದುದ್ದ ಕಾಲುಗಳು ಬಂದಿವೆ.
ಆಗ ನೋಡಿ..ಆದರೆ ಹಂಸಕ್ಕೆ ಬಿಸಿಲಿಗೆ ಬಂದಾಗ ಬಿಸಿಲಿನ ಝಳವನ್ನು ತಡೆಯಲಾಗಲಿಲ್ಲ . ಬಿಸಿಲಿನ ಧಗೆ ಹಾಗೂ ಥಂಡಿಯ ಚಳಿ ತಡೆದುಕೊಳ್ಳಲು ಅದಕ್ಕೆ ರೋಮ ಬೇಕಿತ್ತು.
ಕೋಳಿ ಮರಿಗಳನ್ನು ಕರೆಯುವಾಗ ವೀಣೆಯಂತೆ ಕೂಗಿತು, ಯಾವ ಮರಿಯೂ ಬರಲಿಲ್ಲ , ಬಾತುಕೊಳಿ ಕೆರೆಯಲ್ಲಿ ಸ್ನಾನಕ್ಕೆ ಇಳಿದರೆ ಈಜಲು ಅಸಾಧ್ಯವಾಯಿತು . ಪದರುಗಳುಳ್ಳ ಅಂಗೈ ಮಹಿಮೆ ಆಗ ತಿಳಿಯಿತು.
ಸಂಜೆ ಮೂರೂ ಒಂದೆಡೆ ಸೇರಿದವು . “ ನಮಗೆಲ್ಲ ಮೊದಲಿನ ರೂಪವೇ ಇರಲಿ ! ‘ ಎಂದೇ ಪುನಃ ತಮ್ಮ ಮೊರೆ ಸಲ್ಲಿಸಿದುವು. ಬ್ರಹ್ಮ ನಕ್ಕು ‘ಹಾಗೆಯೇ ಆಗಲಿ!” ಎಂದ.
ನೀತಿ :– ದೈವೇಚ್ಛೆಗೆ ಶರಣಾಗುವುದೇ ಲೇಸು. ದೇವರ ಕೃಪೆ ಊಹನಾತೀತ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.