Homeಜನಮನಮಹಿಳಾ ವಾಣಿ

ಗರಿ ಗರಿಯಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಸವಿಯಿರಿ

ಬೇಕಾಗುವ ಪದಾರ್ಥಗಳು…

ಮೆಂತ್ಯೆ ಸೊಪ್ಪು-1 ಕಟ್ಟು
ಪಾಲಾಕು- 1 ಕಟ್ಟು
ಪುದೀನಾ-1 ಹಿಡಿ
ಕೊತ್ತಂಬರಿ ಸೊಪ್ಪು-1 ಹಿಡಿ
ಆಲೂಗಡ್ಡೆ 3 ರಿಂದ 4 (ಬೇಯಿಸಿದ್ದು)
ಅಚ್ಚಖಾರದ ಪುಡಿ- 2 ಚಮಚ
ಸಣ್ಣ ರವೆ- ಅಗತ್ಯಕ್ಕೆ ತಕ್ಕಷ್ಟು
ಜೀರಿಗೆ- ಸ್ವಲ್ಪ
ದನಿಯಾ ಪುಡಿ-1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ…

ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಮಾಡಿ.
ನಂತರ ಉಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಗೂ ಬೇಯಿಸಿದ್ದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ನೀರು ಹಾಕಬಾರದು. ಏಕೆಂದರೆ ಸೊಪ್ಪಿನಲ್ಲಿ ನೀರಿನ ಅಂಶವಿರುತ್ತದೆ.
ನಂತರ ಪಾಟೀಸ್ ತರ ಮಾಡಿಕೊಂಡು ಸಣ್ಣ ರವೆಯಲ್ಲಿ ಅದ್ದಿ ಕಾದ ತವೆಯಲ್ಲಿ ಒಟ್ಟಿಗೆ 6, 7 ಪಾಟೀಸನ್ನು 2,3 ಚಮಚ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button