ದಿನಕ್ಕೊಂದು ಕಥೆ
ದೇಶಪ್ರೇಮ ಎಂದರೇನು ಗೊತ್ತಾ?
ಒಬ್ಬ ಲಾಯರ್ 46 ಜನ ಅಪರಾಧಿಗಳನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡುವುದಕ್ಕೆ ವಾದ ಮಾಡುತ್ತಿದ್ದ. ಆಗಲೇ ಆತನ ಸಹಾಯಕ ಬಂದು ಸಣ್ಣ ಚೀಟಿಯನ್ನು ಆತನ ಕೈಗೆ ತುರುಕಿದ. ಅದನ್ನು ನೋಡಿದ ಆ ನ್ಯಾಯವಾದಿ, ತನ್ನ ಜೇಬಿನಲ್ಲಿ ಅದನ್ನು ಇಟ್ಟು ಕೊಂಡು, ವಾದವನ್ನು ಮುಂದುವರಿಸಿದ. ಮಧ್ಯಾಹ್ನದ ಊಟದ ವೇಳೆಯಾಯಿತು, ಆಗ ಜಡ್ಜ್ ನ್ಯಾಯವಾದಿಯನ್ನು ಕರೆಸಿ, “ವಾದ ಮಾಡುವಾಗ ನಿಮಗೆ ಒಂದು ಸಂದೇಶ ಬಂದಿದ್ದು ನಾನು ನೋಡಿದೆ. ಏನದು?” ಎಂದು ಕೇಳಿದರು.
ಆಗ ಆ ಲಾಯರ್, “ನನ್ನ ಹೆಂಡತಿ ಸತ್ತಿದ್ದಾಳೆ ಜಡ್ಜ್ ಸಾಹೇಬರೇ” ಎಂದರು. ಆ ಜಡ್ಜ್ ಆಘಾತ ಮತ್ತು ಆಶ್ಚರ್ಯದಿಂದ, “ಇಲ್ಲೇನು ಮಾಡುತ್ತಿದ್ದೀರಿ ಮೊದಲು ಮನೆಗೆ ಹೋಗಿ” ಎಂದರು.
ಆಗ ಆ ಲಾಯರ್, ನಾನು ನನ್ನ ಹೆಂಡತಿಯ ಜೀವವನ್ನು ಮರಳಿ ತರಲಾರೆ, ಆದರೆ ಈ 46 ಜನರ ಜೀವವನ್ನಾದರೂ ಉಳಿಸಬಹುದು ಅಲ್ಲವೇ? ಎಂದರು. ಆ ಜಡ್ಜ್ ಒಬ್ಬ ಬ್ರಿಟಿಷ್ ಆಗಿದ್ದ, ಆ ಎಲ್ಲಾ 46 ಜನರನ್ನು ಬಿಡುಗಡೆ ಮಾಡುವುದಕ್ಕೆ ಆದೇಶಿಸಿದರು.
ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಆ ಲಾಯರ್ ಮತ್ಯಾರು ಅಲ್ಲ ಸಂವಿಧಾನ ಶಿಲ್ಪಿ ಮಹಾನ್ ಚೇತನ ಡಾ.ಬಾಬಾಸಾಹೇಬ್ ಅಂಬೇಡ್ಕರ್.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882