ಹೊಸ ಜೋಡಿಗೆ ಶುಭವಾಗಲಿ..ಮುದನೂರ ರಚಿತ ಕಾವ್ಯ

ಹೊಸ ಜೋಡಿಗೆ ಶುಭವಾಗಲಿ..
ಹೊಸ ಜೀವನದ ಹೊಸಿಲಲಿ ಹೆಜ್ಜೆ ಹಾಕುತ್ತಿರುವ ನಿನಗೆ ಶುಭವಾಗಲಿ..
ಸುಖ, ಸಂತೋಷ ಕೂಟಗಳ ವೇಳೆ ನಮ್ಮನ್ನ ಮರೆತು ನಡೆದರೂ ಚನ್ನ.. ಕಷ್ಟ, ದುಃಖ ಬಂದಾಗ ಮರೆಯದಿರೂ ನೆನಪಿರಲಿ ಚಿನ್ನ..
ಪತಿ-ಪತ್ನಿ ಎರಡು ಚಕ್ರಗಳು, ಸಮತೋಲನದಿ ನಡೆದಾಗ ಸುಗಮ ಸಾಗುವದು ಬಾಳಿನ ಬಂಡಿ..
ಅರಿತು ನಡೆಯಿರಿ ಮುಂದೆ ಸಾಗಿರಿ
ದೇವನೊಲುಮೆ ಇರಲಿ ಜೊತೆಗೆ, ತವರಿನ ಮೇಲೆ ಸಿಟ್ಟಿದ್ದರೂ ಶಪಿಸದಿರು, ಪ್ರಾರ್ಥನೆ ಇರಲಿ ಮಲಗುವ ಮುನ್ನ ..
ತಪ್ಪು ಒಪ್ಪುಗಳ ಬುತ್ತಿ ಕಟ್ಟೆಸೆದು ಪ್ರಸ್ತುತ ಎದುರಾಗುವ ಖುಷಿ ಕ್ಷಣಗಳ ಅನುಭವಿಸಿ, ಭವಿಷ್ಯದ ಚಿಂತೆ ದೂರವಿರಿಸಿ..
ಬಂದದ್ದನ್ನು ಎದುರಿಸಿ ನೊಂದು ತಲೆ ಮೇಲೆ ಕೈ ಹೊತ್ತು ಕೂಡದಿರಿ..
ನಿತ್ಯ ಇಷ್ಟ ದೇವರ ಪ್ರಾರ್ಥನೆಯೊಂದಿಗೆ ಬಾಳ ಬಂಡಿ ಸಾಗಿಸಿ, ಅದುವೆ ನಿಮ್ಮ ಬಾಳಿಗೆ ಸ್ಪೂರ್ತಿ ತುಂಬುವ ಮಂತ್ರವಾಗಲಿ..
ಭೂಕಂಪವೇ ಆದರೂ ಪರಸ್ಪರರು ಕಂಡುಕೊಂಡ ಪ್ರೀತಿ, ನಂಬಿಕೆ ಕದಡದಿರಲಿ, ಅನುಮಾನ ಸುಳಿಯದಿರಲಿ ನಿಮ್ಮ ಬಾಳಲಿ ಎಂದು ಹರಸುವೆ ಕಾವ್ಯ ರೂಪದಿ..
ಹೊಸ ಬಾಳಿನ ಹೊಸಲಲಿ ಹೆಜ್ಜೆ ಹಾಕುವ ನಿಮಗೆ ಶುಭವಾಗಲಿ ಶುಭವಾಗಲಿ..
– ಮಲ್ಲಿಕಾರ್ಜುನ ಮುದನೂರ.