ಪ್ರಮುಖ ಸುದ್ದಿ

ಮೇ.17 ರವರೆಗೆ ಲಾಕ್ ಡೌನ್ ವಿಸ್ತರಣೆ, ಆರೇಂಜ್, ಗ್ರೀನ್ ಝೋನ್ ಗೆ ಸಡಿಲಿಕೆ

ಲಾಕ್ ಡೌನ್ 2 ವಾರ ಮುಂದೂಡಿಕೆ- ಕೇಂದ್ರ ಆದೇಶ
ವಿವಿ‌ಡೆಸ್ಕ್ಃ ದೇಶದಲ್ಲಿ ಮತ್ತೆ ಲಾಕ್ ಡೌನ್ ಎರಡು ವಾರಗಳ‌ಕಾಲ ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಮೇ. 17 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಆದೇಶದಲ್ಲಿ ತಿಳಿಸಿದೆ. ರೆಡ್ ಝೋನ್ ಗೆ ಕಠಿಣ ಕ್ರಮ ಮುಂದುವರೆಯಲಿದೆ.

ಆದರೆ ಗ್ರೀನ್ ಝೋನ್ ಮತ್ತು ಆರೇಂಜ್ ಝೋನ್ ಜಿಲ್ಲೆಗಳಿಗೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.
ಆದರೆ ದೇಶದ ಎಲ್ಲಡೆ ವಿಮಾನ, ಮೆಟ್ರೋ ಮತ್ತು ರೈಲು, ಬಸ್, ಥೇಟರ್, ಮಾಲ್ ಮತ್ತು‌ ಶಾಲಾ ಕಾಲೇಜುಗಳು, ಪಬ್, ಬಾರ್, ಹೊಟೇಲ್, ರೆಸ್ಟೋರೆಂಟ್ ಸೇರಿದಂತೆ ಇದ್ಯಾವದು ಇರುವದಿಲ್ಲ.
ಆದರೆ ಹೊಟೇಲ್, ಬೇಕರಿಯಲ್ಲಿ ಪಾರ್ಸಲ್ ಮಾತ್ರಕ್ಕೆ ಅವಕಾಶ ಕಲ್ಪಿಸಲಾಗಿದೆ

ಗ್ರೀನ್, ಆರೇಂಜ್, ರೆಡ್ ಯಾವ ಝೋನ್ಗಳಲ್ಲೂ ವಿಮಾನ, ರೈಲು, ಬಸ್ ಇವ್ಯಾವ‌ ಸಂಚಾರವು ಇರುವದಿಲ್ಲ.

ಎಂದಿನಂತೆ ದಿನಬಳಕೆ, ಹಾಲು,‌ ಹಣ್ಣು, ತರಕಾರಿ ಮತ್ತು ಔಷಧಿಗೆ ಯಾವುದೇ ಸಮಸ್ಯೆ ಯಾಗುವದಿಲ್ಲ. ಗ್ರೀನ್ ಝೋನ್ 319 ಜಿಲ್ಲೆಯಲ್ಲಿ‌ಕೊಂಚ‌ ರೀಲೀಫ್ ನೀಡಲಾಗಿದೆ. ಕೆಲ ನಿಯಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗುತ್ತಿದೆ ಎಂದು ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button