ಶಹಾಪುರಃ ದೇಶಕ್ಕೆ ರೈತರ ಕೊಡುಗೆ ಅಪಾರ – ಡಾ.ಶಿವಾನಂದ ಶ್ರೀ
ರೈತರ ಪಾದಪೂಜೆ, ನೇಗಿಲು ಪೂಜೆ, ಸಾಧಕರಿಗೆ ಸನ್ಮಾನ
ರೈತ ವಿಶ್ವ ದಿನಾಚರಣೆ
ಪ್ರಗತಿಪರ ರೈತರ ಪಾದಪೂಜೆ, ನೇಗಿಲು ಪೂಜೆ, ಸಾಧಕರಿಗೆ ಸನ್ಮಾನ
ದೇಶಕ್ಕೆ ರೈತರ ಕೊಡುಗೆ ಅಪಾರ – ಡಾ.ಶಿವಾನಂದ ಶ್ರೀ
yadgiri, ಶಹಾಪುರಃ ದೇಶ ಸಮೃದ್ಧವಾಗಿ ಶಾಂತಿಯುತವಾಗಿ ಇರಬೇಕಾದರೆ ಮುಖ್ಯವಾಗಿ ರೈತ ಮತ್ತು ಯೋಧರ ಸೇವೆ ಅತ್ಯಗತ್ಯ. ನಮ್ಮ ದೇಶಕ್ಕೆ ರೈತರ ಕೊಡುಗೆ ಅಪಾರವಿದೆ ಎಂದು ಸೊನ್ನ ವಿರಕ್ತಮಠದ ಡಾ.ಶ್ರೀಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ಸಮೀಪದ ಭೀಮರಾಯನಗುಡಿ ಕೃಷಿ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ರೈತರ ಶ್ರಮ ವ್ಯರ್ಥವಾಗುತ್ತಿದ್ದು, ಒಂದಿಲ್ಲೊಂದು ತೊಂದರೆಯಿಂದ ಬೆಳೆ, ಫಸಲು ಸಮರ್ಪಕ ಬೆಲೆ ದೊರೆಯದೇ ಹೈರಾಣಾಗುತ್ತಿದ್ದಾರೆ. ನಿಸರ್ಗದಲ್ಲಿ ಏರು ಪೇರಾಗಿ ಅತಿವೃಷ್ಠಿ ಅನಾವೃಷ್ಟಿಯಿಂದ ಅವರ ಬದುಕು ಕಷ್ಟಕರವಾಗಿದೆ. ರೈತ ದುಡಿದರೆ ನಮಗೆಲ್ಲ ಹೊಟ್ಟೆಗೆ ಅನ್ನ ಸಿಗಲಿದೆ ಇಲ್ಲವಾದರೆ ಉಪವಾಸವೇ ಗತಿ ಎಂಬುದನ್ನು ಅರ್ಥೈಸಿಕೊಂಡು ನಡೆಯಬೇಕಿದೆ. ಆಡಳಿತಾರೂಢ ಸರ್ಕಾರಗಳು ರೈತರ ಪರವಾಗಿ ಕೆಲಸ ಮಾಡಬೇಕಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಮಾತನಾಡಿ, ರೈತರು ಸಂಕಷ್ಟಕ್ಕೆ ಸರ್ಕಾರ ಸಹಕರಿಸಬೇಕು. ಜನಪ್ರತಿನಿಧಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಯಾವುದೇ ಸರ್ಕಾರ ಬರಲಿ ಭ್ರಷ್ಟಾಚಾರ ಮಾತ್ರ ನಿಯಂತ್ರಣವಾಗುತ್ತಿಲ್ಲ ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ರೈತಾಪಿ ಜನರ ಕೆಲಸ ಕಾರ್ಯಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕಿದೆ. ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಅಗತ್ಯವಿದೆ ಎಂದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ದೊಡ್ಡೊಗೌಡ ಪಾಟೀಲ್ ನರಬೋಳಿ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರಡಕಲ್ ರುದ್ರಮುನಿ ಶ್ರೀ ಮತ್ತು ಮಹಲರೋಜಾದ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.
ಶ್ರೀಗಳ ಸಮ್ಮುಖದಲ್ಲಿ ನೇಗಿಲು ಪೂಜೆ ನೆರವೇರಿಸಲಾಯಿತು. ನಂತರ ಪ್ರಗತಿ ಪರ ಸುಮಾರು 16 ಜನ ರೈತರಿಗೆ ಪಾದಪೂಜೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಚನ್ನಾರಡ್ಡಿ ತುನ್ನೂರ, ಲಲಿತಾ ಅನಪುರ, ಭೀಮಣ್ಣ ಮೇಟಿ, ನಾಗರತ್ನ ಅನಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಘದ ರಾಜ್ಯಧ್ಯಕ್ಷ ಶಾಂತಗೌಡ ಚನ್ನಪಟ್ಟಣ ಅಧ್ಯಕ್ಷತೆವಹಿಸಿದ್ದರು.